ಶಾಲಾ ಆವರಣದ ಹೊಂಡದಲ್ಲಿ ಬಿದ್ದು 3 ಮಕ್ಕಳು ಮೃತ್ಯು

(ನ್ಯೂಸ್ ಕಡಬ) newskadaba.com ಹಾವೇರಿ, ಅ. 24. ಶಾಲಾ ಆವರಣದಲ್ಲಿ ಆಟದಲ್ಲಿನಿರತರಾಗಿದ್ದ ಮೂವರು ಮಕ್ಕಳು ಶಾಲಾ ಕಾಮಗಾರಿಗೆಂದು ತೋಡಲಾಗಿದ್ದ ಹೊಂಡದಲ್ಲಿ ಬಿದ್ದು ಧಾರುಣವಾಗಿ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ನಡೆದಿದೆ.

 

ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿನ ಶಾಲಾ ಆವರಣದಲ್ಲಿನ ಕಾಮಗಾರಿಯ ಸಲುವಾಗಿ ಹೊಂಡವೊಂದನ್ನು ತೋಡಲಾಗಿದ್ದು, ಈ ಶಾಲಾ ಆವರಣದಲ್ಲಿ 7- 8 ಮಕ್ಕಳು ಆಟವಾಡುತ್ತಿದ್ದವು. ಹೀಗೆ ಆಟವಾಡುತ್ತಾ ಹೊಂಡದಲ್ಲಿ ಬಿದ್ದು ಮೂವರು ಮಕ್ಕಳು ದಾರುಣವಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೂವರು ಮಕ್ಕಳ ಶವಗಳನ್ನು ಸ್ಥಳೀಯರು ಹೊರತೆಗೆದಿದ್ದು, ಇನ್ನೂ 3-4 ಮಕ್ಕಳು ಹೊಂಡದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Also Read  ಮಗಳು ಫಸ್ಟ್​ಟೈಮ್​ ವೋಟ್ ಮಾಡುತ್ತಿದ್ದಾಳೆ.!➤ ಕಿಚ್ಚ ಸುದೀಪ್ ಸಂಭ್ರಮ

error: Content is protected !!
Scroll to Top