ಶಾಲೆಗೆ ನುಗ್ಗಿ ಕಳ್ಳತನ ➤ಮೂವರ ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . 24: ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಸರ್ಕಾರಿ ಶಾಲೆಯಲ್ಲಿ ಅ. 20ರಂದು ನಡೆದ ಕಳವು ಪ್ರಕರಣ ಸಂಬಂಧ ಮೂವರು ಆರೋಪಿ ಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೊಕ್ಕಡ ನಿವಾಸಿಗಳಾದ ಕೃಷ್ಣಾನಂದ ಯಾನೆ ಕಿಣಿ, ಸಿದ್ದೀಕ್, ಇಚಿಲಂಪಾಡಿಯ ವಿನೋದ್ ಎಂದು ಗುರುತಿಸಲಾಗಿದೆ. ಅ. 20ರಂದು ಶಾಲೆಯ ಕಂಪ್ಯೂಟರ್‌ ಕೋಣೆ, ಬಿಸಿ ಊಟದ ಕೊಠಡಿ ಹಾಗೂ ತರಗತಿಗಳ ಕೊಠಡಿಯ ಬೀಗ ಮುರಿದು 2 ಕಂಪ್ಯೂಟರ್‌ ಹಾಗೂ ಗ್ಯಾಸ್‌ ಸಿಲಿಂಡರ್ ಕಳವು ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ನಾಯಕ್ ತಂಡ ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಕಂಪ್ಯೂಟರ್‌ ಹಾಗೂ ಗ್ಯಾಸ್‌ ಸಿಲಿಂಡರ್ ವಶಪಡಿಸಿಕೊಂಡಿದ್ದಾರೆ.

Also Read  ಟ್ರಾಫಿಕ್ ಪೊಲೀಸರಿಂದ ನಿತ್ಯ ಕಿರುಕುಳ ಆರೋಪ- ಕಬಕ ಗ್ರಾಮಸ್ಥರಿಂದ ಶಾಸಕರಿಗೆ ದೂರು

error: Content is protected !!
Scroll to Top