ಬಂಟ್ವಾಳ : ರೌಡಿಶೀಟರ್ ಫಾರೂಕ್ ಹಂತಕರ ಅರೇಸ್ಟ್

(ನ್ಯೂಸ್ ಕಡಬ) newskadaba.com ಬಂಟ್ವಾಳ . 24: ಬಂಟ್ವಾಳದ ಮೆಲ್ಕಾರ್ ಎಂಬಲ್ಲಿ ರೌಡಿಶೀಟರ್ ಫಾರೂಕ್ ನನ್ನು ದುಷ್ಕರ್ಮಿಗಳು ತಲವಾರಿ‌ನಲ್ಲಿ ಕಡಿದು ಹತ್ಯೆ ಮಾಡಿದ್ದರು.  ಈತ ಮೆಲ್ಕಾರು ಸಮೀಪ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ಕಾರಿನಲ್ಲಿ ಬೆನ್ನಟ್ಟಿದ್ದ ಇಬ್ಬರ ತಂಡ ಹಿಗ್ಗಾಮುಗ್ಗ ಕಡಿದು ಪರಾರಿಯಾಗಿದ್ದರು.

ಆರೋಪಿಗಳು ತಪ್ಪಿಸಿಕೊಂಡು ಇಂದು ಮುಂಜಾನೆ ಬೆಂಗಳೂರಿನ ಕಡೆ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ ತಂಡ. ಆರೋಪಿಗಳನ್ನು ಬೆನ್ನಟ್ಟಿದ್ದಾರೆ. ಆದರೆ ಆರೋಪಿಗಳು ತಪ್ಪಿಸಿಕೊಳ್ಳುವ ಬರದಲ್ಲಿ ಪೊಲೀಸರ ಮೇಲೆಯೇ ತಲವಾರುನಿಂದ  ಹಲ್ಲೆ ಮಾಡಿದ್ದರು. ಈ ವೇಳೆ ಓರ್ವ ಆರೋಪಿಯನ್ನು ಸೆರೆಹಿಡಿಯಾಗಿತ್ತು. ಇಬ್ಬರು ಆರೋಪಿಗಳು ಪರಾರಿಯಾಗಿದ್ದರು. ಇದೀಗಾ ಪರಾರಿಯಾಘಿದ್ದ ಆರೋಪಿಗಳನ್ನು ಬಂಟ್ವಾಳ ಠಾಣಾ ಪಿಎಸೈ ಅವಿನಾಶ್ ಅವರ ತಂಡ  ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

Also Read  ಪುತ್ತೂರು: ಬಿಜೆಪಿಯ ಸಂಜೀವ ಮಠಂದೂರು 4735 ಮತಗಳ ಅಂತರದಿಂದ ಮುನ್ನಡೆ

 

 

ಬಂಧಿತ ಆರೋಪಿಗಳನ್ನು ಪಾಣೆಮಂಗಳೂರು ಸಮೀಪದ ನಂದಾವರ ನಿವಾಸಿ ಖಲೀಲ್ ಯಾನೆ ಇಬ್ರಾಹಿಂ ಖಲೀಲ್ (27) ಹಾಗೂ ಹಫೀಜ್ ಯಾನೆ ಅಪ್ಪಿ (28) ಮತ್ತು ಆರೋಪಿಗಳು ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪಿ ಕಾರು ಚಾಲಕ ಇರ್ಷಾದ್ ನನ್ನು ಪೊಲೀಸರು ಬಂಧಿಸಿದ್ದಾರೆ.  ಘಟನೆಯಲ್ಲಿ ಬಂಡ್ವಾಳ ಠಾಣಾ ಪಿ ಎಸ್ ಐ ಪ್ರಸನ್ನ ಅವರಿಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ  ಪಡೆಯುತ್ತಿದ್ದಾರೆ.

 

error: Content is protected !!
Scroll to Top