ನಾಪತ್ತೆಯಾಗಿದ್ದ ಸವಣೂರಿನ ಯುವತಿ ವಿವಾಹಕ್ಕೆ ಟ್ವಿಸ್ಟ್ ➤ ಪ್ರಿಯಕರನ ವಿರುದ್ದ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಸವಣೂರು . 24:  ಕಡಬ ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ಯುವತಿ ನಾಪತ್ತೆ ಪ್ರಕರಣಕ್ಕೆ, ಕೆಲವು ದಿನಗಳ ಹಿಂದೆ ಯುವತಿ ತನ್ನ ಪ್ರಿಯಕರನ ಜೊತೆ ಮುಂಬಯಿಯಲ್ಲಿ ಮದುವೆಯಾಗಿ ಪತ್ತೆಯಾಗುವ ಮೂಲಕ ನಾಪತ್ತೆ ಪ್ರಕರಣ ಇತ್ಯಾರ್ಥವಾಗಿತ್ತು. ಆದರೆ ಇದೀಗಾ ಮತ್ತೆ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಈಕೆ ಅ. 8ರಂದು ಮನೆಗೆ ಬಾರದೆ ನಾಪತ್ತೆಯಾಗಿದ್ದಳು.

ಬಳಿಕ ಯುವತಿಯ ತಂದೆ ಪುತ್ತೂರು ಮಹಿಳಾ ಠಾಣಡಗೆ ದೂರು ನೀಡಿದ್ದು ಪ್ರಕರಣವು ದಾಖಲಾಗಿತ್ತು. ಇದಾದನಂತರ ಅ.11 ರಂದು ಆಕೆ ತನ್ನ ಬಹುಕಾಲದ ಪ್ರಿಯಕರ ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಬಾಲಕೃಷ್ಣ ಗೌಡ ಎಂಬುವರ ಜೊತೆ ಮುಂಬೈ ನಲ್ಲಿ ಪತ್ತೆಯಾಗಿದ್ದರು. ಕೊನೆಗೂ ಪ್ರಕರಣ ಸುಖಾಂತ್ಯಗೊಂಡಿತ್ತು ಎನ್ನುವಷ್ಟರಲ್ಲಿ ಮತ್ತೇ ಯುವತಿ ತನ್ನ ಪ್ರಿಯಕರನ ವಿರುದ್ದ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಮತ್ತೊಂದು ಟ್ವಸ್ಟ್ ನೀಡಿದ್ದಾಳೆ. ಯುವತಿ ಪುತ್ತೂರು ಠಾಣೆಗೆ ತೆರಳಿ, ನನ್ನನ್ನು ಸವಣೂರಿನ ಬಾಲಕೃಷ್ಣ ಎಂಬಾತ ಅಪಹರಿಸಿ ಮುಂಬೈಗೆ ಕರೆದುಕೊಮಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ. ಇದೀಗಾ ಯುವಕನ ವಿರುದ್ದ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಾಗಿದೆ.

Also Read  ಶಬರಿಮಲೆ ದೇವಸ್ಥಾನ ಇಂದಿನಿಂದ ತೆರೆಯಲಿದೆ, ಮಹಿಳೆಯರಿಗೆ ಭದ್ರತೆಯ ಕೊರತೆ

error: Content is protected !!
Scroll to Top