ಕರಾವಳಿಯಲ್ಲಿ ಮತ್ತೆ ಮುಂದುವರಿದ ಸರಣಿ ಹತ್ಯೆ ➤ ಬಂಟ್ವಾಳದಲ್ಲಿ ಮತ್ತೋರ್ವ ರೌಡಿ ಶೀಟರ್ ನ ಬರ್ಬರ ಹತ್ಯೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 23. ಕರಾವಳಿಯಲ್ಲಿ ರೌಡಿ ಶೀಟರ್ ಗಳ ಹತ್ಯೆಯ ಸರಣಿ ಮುಂದುವರಿದಿದ್ದು, ಇಂದು ಕೂಡಾ ಮೆಲ್ಕಾರ್ ಬಳಿಯ ಗುಡ್ಡೆಯಂಗಡಿ ಎಂಬಲ್ಲಿ ಯುವಕನೊಬ್ಬನನ್ನು ಹತ್ಯೆಗೈಯಲಾಗಿದೆ.


ಮೃತ ಯುವಕನನ್ನು ಕಲ್ಲಡ್ಕ ನಿವಾಸಿ ರೌಡಿ ಶೀಟರ್ ಚೆನ್ನಾ ಫಾರೂಕ್ ಅಲಿಯಾಸ್ ಉಮ್ಮರ್ ಫಾರೂಕ್ (35) ಎಂದು ಗುರುತಿಸಲಾಗಿದೆ. ಈತ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿರುವ ತಂಡವೊಂದು ಕಡಿದು ಕೊಲೆಗೈದು ಪರಾರಿಯಾಗಿದೆ.

ಈತ ಬೈಕ್ ನಲ್ಲಿ ತೆರಳುತಿದ್ದ ವೇಳೆ ಕಾರಿನಲ್ಲಿ ಬಂದ ಆತನ ಸ್ನೇಹಿತರು ತಲವಾರಿನಿಂದ ಕಡಿದು ಈ ಕೊಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಸ್ನೇಹಿತನೊಬ್ಬನ ಜೊತೆಗೆ ಉಂಟಾದ ವೈಷಮ್ಯದಿಂದ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ತಲವಾರಿನಿಂದ ಫಾರೂಕುಗೆ ಹಿಗ್ಗಾಮುಗ್ಗಾ ಕಡಿದಿದ್ದು, ಗಂಭೀರ ಗಾಯಗೊಂಡ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆಗೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

Also Read  ಮಂಗಳೂರು: ಗೋಲ್ಡ್ ಬೈಯರ್ ಸಂಸ್ಥೆ ವೈಟ್ ಗೋಲ್ಡ್‌ ನ ನೂತನ ಶಾಖೆ ಲೋಕಾರ್ಪಣೆ

error: Content is protected !!
Scroll to Top