ಎಸ್ಡಿಪಿಐ ನಾವೂರು ಗ್ರಾಮ ಪಂಚಾಯತ್ ಚುನಾವಣೆಯ ಅಭ್ಯರ್ಥಿ ಘೋಷಣೆ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ. 23. ಮುಂಬರುವ ಪಂಚಾಯತ್ ಚುನಾವಣೆಯ ನಾವೂರು ಗ್ರಾಮದ ವಾರ್ಡ್ ಸಂಖ್ಯೆ-2ರ ಪಕ್ಷದ ಅಭ್ಯರ್ಥಿಗಳ ಮೊದಲ ಹಂತದ ಘೋಷಣೆ ಮತ್ತು ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮವು ನಾವೂರು ಗ್ರಾಮದ ಮುರ ಗ್ಲೋಬಲ್ ಫೌಂಡೇಶನ್ ಕಛೇರಿ ಎದುರು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ನಾವೂರು ಗ್ರಾಮ ಸಮಿತಿ ಅಧ್ಯಕ್ಷರಾದ ಬಶೀರ್ ಕಳಸ ವಹಿಸಿದ್ದರು. ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಹೈದರ್ ನೀರ್ಸಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎಸ್ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾಗಿರುವ ಅಶ್ರಫ್ ಮಾಚಾರ್ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿ ಅಭ್ಯರ್ಥಿಗಳ ಘೋಷಣೆ ಮಾಡಿದರು. ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ SDTU ಬೆಳ್ತಂಗಡಿ ತಾಲೂಕು ಸಮಿತಿ ಉಪಾಧ್ಯಕ್ಷ ಅಜಯ್ ಲೋಬೊ, ಉಸ್ಮಾನ್ ಬಂಗಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಕಡಬ: ಗರ್ಭವತಿಯಾದ ಅಪ್ರಾಪ್ತೆ ➤ ಯುವಕ ಅರೆಸ್ಟ್

ಅಭ್ಯರ್ಥಿ ಘೋಷಣೆ:
ನಾವೂರು ಗ್ರಾಮದ ಎರಡನೇ ವಾರ್ಡಿನ ಮೊದಲ ಹಂತದಲ್ಲಿ ಅಬ್ದುಲ್ ಖಾದರ್, ಮುಹಮ್ಮದ್ ಸ್ವಾದಿಕ್ ಮತ್ತು ಝರೀನಾರವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಎಸ್ ಡಿ ಪಿ ಐ ಧ್ವಜ ಹಿಡಿದು ಪಕ್ಷಕ್ಕೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಸಲೀಂ ಮುರ ಸ್ವಾಗತಿಸಿ, ಅಶ್ರಫ್ ನಾವೂರು ಧನ್ಯವಾದಗೈದರು. ಸಿನಾನ್ ಮುರ ಕಾರ್ಯಕ್ರಮ ನಿರೂಪಿಸಿದರು.

error: Content is protected !!
Scroll to Top