ಈರುಳ್ಳಿ ಬೆಲೆ ಏರಿಕೆ, ಕಡಿಮೆ ಆಯ್ತು ಬಳಕೆ ➤ ಖರೀದಿಗೆ ಗ್ರಾಹಕರು ಹಿಂದೇಟು!



(ನ್ಯೂಸ್ ಕಡಬ) newskadaba.com ಬೆಂಗಳೂರು . 23: ಈರುಳ್ಳಿ ಬೆಲೆ ಏರಿಕೆಯಿಂದ ತಾಲೂಕಿನ ಹೋಟೆಲ್‌, ಡಾಬಾ, ರೆಸ್ಟೋರೆಂಟ್‌ಗಳಲ್ಲಿ ಈರುಳ್ಳಿ ಬಳಕೆ ಕಡಿಮೆಯಾಗುತ್ತಿದೆ. ತಿಂಡಿ ತಿನಿಸುಗಳಿಗೆ ಈರುಳ್ಳಿ ಬಳಕೆ ಪ್ರಮಾಣ ಕಡಿಮೆಯಾಗಿದೆ. ಇದರಿಂದ ರುಚಿ ಸಿಗದಂತಾಗಿದೆ.







ಗ್ರಾಹಕರಿಗಷ್ಟೇ ಅಲ್ಲ, ಮಾಲೀಕರಿಗೂ ಸಹ ದಿಕ್ಕು ತೋಚದ ಸ್ಥಿತಿ ಎದುರಾಗಿದೆ.ಶೇ.50ರಷ್ಟು ಈರುಳ್ಳಿ ಬೆಳೆ ಮಹಾರಾಷ್ಟ್ರದಲ್ಲಿಯೇ ಬೆಳೆಯಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಜಮೀನಿನಲ್ಲೇ ಬೆಳೆ ಕೊಳೆತಿದೆ. ಇದರಿಂದ ಈರುಳ್ಳಿಗೆ ರಾಜ್ಯದಲ್ಲಿ ಬೆಲೆ ಏರಿಕೆಯಾಗಿದೆ. ಈರುಳ್ಳಿ ಬೆಲೆ ಏರಿಕೆಯಿಂದಾಗಿ ಈಗ ಈರುಳ್ಳಿ ಬಳಕೆ ಮಾಡುತ್ತಿರುವವರ ಸಂಖ್ಯೆಯೇ ಕಡಿಮೆಯಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿ 100ರೂಪಾಯಿಗೆ ಏರಿಕೆಯಾಗಿದೆ. ಸಣ್ಣ ಈರುಳ್ಳಿಗೂ ಸಹ ಅಧಿಕ ಬೆಲೆ ಇರುವುದರಿಂದ ಗ್ರಾಹಕರು ಈರುಳ್ಳಿ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.






 

error: Content is protected !!
Scroll to Top