ಡ್ರಂಕ್ ಆ್ಯಂಡ್ ಡ್ರೈವ್ ಮಾಡಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತ

(ನ್ಯೂಸ್ ಕಡಬ) newskadaba.com ಕಾರವಾರ . 23: ಡ್ರಂಕ್ ಅಂಡ್ ಡ್ರೈವ್ ಮಾಡಿದ ವ್ಯಕ್ತಿಯೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕಾರವಾರದ‌ ಗ್ರೀನ್ ಸ್ಟ್ರೀಟ್‌ ಬಳಿ ಗುರುವಾರ ರಾತ್ರಿ ನಡೆದಿದೆ.

 

ರಾಜಸ್ಥಾನ ಮೂಲದ ರವೀಂದ್ರ ಶರ್ಮಾ ಕುಡಿದು ಕಾರು ಚಾಲನೆ ಮಾಡಿದ ವ್ಯಕ್ತಿ.  ಕಾರವಾರದಲ್ಲಿ ರೈಲ್ವೆ ಗುತ್ತಿಗೆದಾರನಾಗಿ ಕೆಲಸ ಮಾಡ್ತಿದ್ದ ಈತ ಕಂಠಪೂರ್ತಿ ಕುಡಿದು ಕಾರು ಚಾಲನೆ ಮಾಡಿದ್ದಾನೆ. ನಗರದ ಗ್ರೀನ್ ಸ್ಟ್ರೀಟ್ ಬಳಿ ನಿಲ್ಲಿಸಿದ್ದ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದ್ದಾನೆ. ಹೀಗಾಗಿ ಸಾರ್ವಜನಿಕರು ಗೂಸಾ ನೀಡಿದ್ದಾರೆ‌. ಆಕ್ರೋಶಗೊಂಡ ಸಾರ್ವಜನಿಕರು ಕೊನೆಗೆ ಸಂಚಾರಿ ಠಾಣೆ ಪೊಲೀಸರಿಗೆ ನೀಡಿದ್ದಾರೆ.

Also Read  ವಿಶ್ವಕರ್ಮರು ಶ್ರಮ ಜೀವಿಗಳು- ಮಮತಾ ಗಟ್ಟಿ

 

 

error: Content is protected !!
Scroll to Top