ತುಳು ನಟ ಸುರೇಂದ್ರನನ್ನು ಕೊಲೆಗೈದಿದ್ದು ನಾನೇ ➤ ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರ ಎಂದ ಆರೋಪಿ

(ನ್ಯೂಸ್ ಕಡಬ) newskadaba.com ಬಂಟ್ವಾಳ . 23: ತುಳು ನಟ ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ. ಪೊಲೀಸರಿಗೆ ಆಡಿಯೋ ಸಂದೇಶ ಕಳುಹಿಸಿ ಆರೋಪಿ ಸತೀಶ್ ಕುಲಾಲ್ ತಪ್ಪೊಪ್ಪಿಕೊಂಡಿದ್ದಾನೆ.

ಕಳೆದ ನಿನ್ನೆ ಬಂಟ್ವಾಳದ ಬಿಸಿ ರೋಡ್ ನಲ್ಲಿದ್ದಂತ ತುಳು ನಟ ಹಾಗೂ ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಅವರನ್ನು ಅವರದ್ದೇ ಫ್ಲಾಟ್ ನಲ್ಲಿ ಬರ್ಬರವಾಗಿ ಕೊಲೆ ಗೈಯ್ಯಲಾಗಿತ್ತು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕೊಲೆಯ ಆರೋಪಿಗಾಗಿ ಬಲೆ ಕೂಡ ಬೀಸಿದ್ದರು.
ಇದರ ಮಧ್ಯೆ  ಪೊಲೀಸರಿಗೆ ಆಡಿಯೋ ಸಂದೇಶವೊಂದನ್ನು ಕಳುಹಿಸಿರುವ ಕೊಲೆ ಆರೋಪಿ ಸತೀಶ್ ಕುಲಾಲ್ ಎಂಬಾತ, ಸುರೇಂದ್ರ ಬಂಟ್ವಾಳ ಅವರನ್ನು ಕೊಲೆ ಗೈದಿದ್ದು ನಾನೆ. ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರವಾಗಿದೆ. ಕಿಶನ್ ಹೆಗ್ಡೆ ಹತ್ಯೆಗೆ ಸುರೇಂದ್ರ ಹಣದ ಸಹಾಯ ಮಾಡಿದ್ದನು.

Also Read  ವಿಕಲಚೇತನರ ಬಸ್ ಪಾಸ್ ಫೆಬ್ರುವರಿ 28ರವರೆಗೆ ಮಾನ್ಯ

ಈ ವಿಷಯ ಬೇರೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇನೆ ಅಂದಿದ್ದ. ಅದಕ್ಕಾಗಿ ನಾನೇ ಕೊಲೆ ಮಾಡಿದೆ ಎಂದಿದ್ದಾನೆ. ಇನ್ನು ಈ ಆಡಿಯೋ ಸಂಭಾಷನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎರಡು ದಿನಗಳಲ್ಲಿ ತಾನೇ ಪೊಲೀಸರಿಗೆ ಶರಣಾಗುವೆ ಎಂದು ವಿಡೀಯೋದಲ್ಲಿ ಸತೀಶ್ ಕುಲಾಲ್ ತಿಳಿಸಿದ್ದಾನೆ.

error: Content is protected !!
Scroll to Top