ಕಿಲಾಡಿ ಕಳ್ಳಿಯರನ್ನು ಬಂಧಿಸಿದ ಉಡುಪಿ ಪೊಲೀಸರು .!

(ನ್ಯೂಸ್ ಕಡಬ) newskadaba.com ಉಡುಪಿ . 23: ಬಸ್ಸಿನಲ್ಲಿ ಪ್ರಯಾಣಿಕರೊಬ್ಬರ ನಗದು ಸಹಿತ ಪರ್ಸ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಕೇವಲ 12 ಗಂಟೆಯೊಳಗೆ ಆರೋಪಿಗಳಾದ ಮೂವರು ಮಹಿಳೆಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಬಳ್ಳಾರಿಯ ಸಬಿತಾ, ಲತಾ, ಕವಿತಾ ಬಂಧಿತ ಆರೋಪಿಗಳು. ಇವರಿಂದ 32,400 ರೂ. ನಗದು, ಎರಡು ಮೊಬೈಲ್, ಎರಡು ಎಟಿಎಂ ಕಾರ್ಡ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬೆಂಗಳೂರು ಉತ್ತರಹಳ್ಳಿ ಅರ್ಚನಾ ರಾವ್ (39) ಎಂಬವರು ಸಂಜೆ ಸಿಟಿಬಸ್ನಲ್ಲಿ ಉಡುಪಿ ಸಿಟಿಬಸ್ ನಿಲ್ದಾಣದಿಂದ ಕುಂಜಿಬೆಟ್ಟುವಿಗೆ ಪ್ರಯಾಣಿಸುತ್ತಿದ್ದರು. ಅದೇ ಬಸ್ಸಿನಲ್ಲಿ ಈ ಮೂವರು ಮಹಿಳೆಯರು ಪ್ರಯಾಣಿಸಿದ್ದಾರೆ,ಬಳಿಕ  ಅರ್ಚನಾ ರಾವ್  ಅವರ ಗಮನಕ್ಕೆ ಬಾರದಂತೆ, ಅವರ ಬ್ಯಾಗಿನ ಜಿಪ್ ತೆರೆದು ಅದರಲ್ಲಿದ್ದ ಪರ್ಸ್ನ್ನ ಈ ಮೂವರು ಮಹಿಳೆಯರು ಕಳವು ಮಾಡಿದ್ದರು.

Also Read  ಎಂ. ಗೋಪಾಲ ಸ್ವಾಮಿ ಪ್ರವಾಸ

ಆ ಪರ್ಸ್ನಲ್ಲಿ ವಿವಿಧ ಬ್ಯಾಂಕ್ ಗಳ 4 ಎಟಿಎಂ ಕಾರ್ಡ್, ವೋಟರ್ ಐಡಿ, 5 ಸಾವಿರ ರೂ. ನಗದು ಹಾಗೂ ಇತರೇ ದಾಖಲೆ ಪತ್ರಗಳು ಇದ್ದವು. ಬಳಿಕ ಆ ಮಹಿಳೆಯರು ಬ್ಯಾಗಿನಲ್ಲಿದ್ದ ಚೀಟಿಯಲ್ಲಿ ಬರೆದಿಟ್ಟಿದ್ದ ಎಟಿಎಂ ಪಿನ್ ಬಳಸಿ 25,000ರೂ. ಹಣವನ್ನು ಡ್ರಾ ಮಾಡಿದ್ದರೆಂದು ಉಡುಪಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಗಳನ್ನು ಉಡುಪಿ ನಗರದಲ್ಲಿ ಕಾರ್ಯಾಚರಣೆ ಕೈಗೊಂಡು ಕಳೆದ ದಿನ ಬಂಧಿಸು ವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

error: Content is protected !!
Scroll to Top