ಮಹತ್ವದ ಬದಲಾವಣೆಯತ್ತ ಮಹೀಂದ್ರಾ ಸಂಸ್ಥೆ ►ವರ್ಷಾಂತ್ಯದಲ್ಲಿ ವಿನೂತನ ಮಾದರಿಯ “ಎಲೆಕ್ಟ್ರಿಕ್ ಎಂಜಿನ್ ಸ್ಕೂಟರ್‌ಗಳು..”!!

(ನ್ಯೂಸ್ ಕಡಬ) newskadaba.com ತಂತ್ರಜ್ಞಾನ,ಸೆ.26. ಆಟೋ ಉದ್ಯಮದಲ್ಲಿ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಮಹೀಂದ್ರಾ ಸಂಸ್ಥೆಯು ಸ್ಕೂಟರ್ ಆವೃತ್ತಿಗಳನ್ನು ಎಲೆಕ್ಟ್ರಿಕ್ ಎಂಜಿನ್ ಜೊತೆ ಅಭಿವೃದ್ಧಿಗೊಳಿಸುವ ಕುರಿತು ಮಹತ್ವದ ಯೋಜನೆಯನ್ನು ರೂಪಿಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಇ2ಒ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಈಗಾಗಲೆ ಹಿಡಿತ ಸಾಧಿಸಿರುವ ಮಹೀಂದ್ರಾ ಸಂಸ್ಥೆಯು ಇದೀಗ ಮತ್ತೊಂದು ಮಹತ್ವದ ಬದಲಾವಣೆಗೆ ಸಜ್ಜಾಗಿದೆ.

ಈಗಾಗಲೇ ವಿನೂತನ ಪ್ರಯೋಗಗಳನ್ನು ಕೈಗೊಂಡಿರುವ ಮಹೀಂದ್ರಾ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗವು ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕ ವಿನ್ಯಾಸಗಳನ್ನು ಸಿದ್ಧಗೊಳಿಸಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಹೊರಹಾಕಿರುವ ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹೊಸ ಯೋಜನೆ ಕುರಿತು ಸಾಕಷ್ಟು ನಿರೀಕ್ಷೆ ಹೊಂದಿದ್ದೇವೆ ಎಂದು ಟ್ವಿಟ್ ಮಾಡಿದ್ದಾರೆ.

Also Read  ಕಾರ್ಕಳ ಬೆಂಕಿಗೆ ಆಹುತಿಯಾದ ಲಕ್ಷಾಂತರ ಮೌಲ್ಯದ ಚಿನ್ನಾಭರಣದ ಬಾಕ್ಸ್

ಹೊಸ ಯೋಜನೆ ಬಗ್ಗೆ ಉತ್ಸುಕರಾಗಿರುವ ಆನಂದ್ ಮಹೀಂದ್ರಾ ಅವರು ಪುಣೆಯಲ್ಲಿರುವ ಆರ್.ಡಿ ಘಟಕಕ್ಕೆ ಭೇಟಿ ಸಂಶೋಧನಾ ತಂಡದೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಯೋಜನೆಯ ಮಹತ್ವದ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಸುಧಾರಿತ ತಂತ್ರಜ್ಞಾನಗಳ ಅಭಿವೃದ್ದಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮಹೀಂದ್ರಾ ಸಂಸ್ಥೆಯ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಯೋಜನೆಯು ಜಾವಾ ಬ್ರ್ಯಾಂಡ್‌ನ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ಮಾಹಿತಿ ದೊರೆತಿದ್ದು, ಇದಕ್ಕಾಗಿಯೇ ಪಿಎಂಟಿಸಿ ಮತ್ತು ಕ್ಲಾಸಿಕ್ ಲೆಜೆಂಡ್ಸ್ ಸಂಸ್ಥೆಗಳ ಜೊತೆಗೂಡಿ ಮಹೀಂದ್ರಾ ಕಾರ್ಯನಿರ್ವಹಿಸಲಿದೆ.

ಸದ್ಯ ದ್ವಿಚಕ್ರ ಮಾರುಕಟ್ಟೆಯಲ್ಲಿ ಹೀರೊ ಮೋಟಾರ್ಸ್, ಟಿವಿಎಸ್, ಬಜಾಜ್ ಸಂಸ್ಥೆಗಳು ಕೂಡಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸುತ್ತಿದ್ದು, ಇದಕ್ಕೂ ಮೊದಲು ಮಹೀಂದ್ರಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ತ್ವರಿತಗೊಳಿಸಲಾಗುತ್ತಿದೆ

 ಎಲೆಕ್ಟ್ರಿಕ್ ಸ್ಕೂಟರ್‌ಗಳು ವರ್ಷಾಂತ್ಯಕ್ಕೆ ಇಲ್ಲವೇ 2018ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಖರೀದಿಗೆ ಲಭ್ಯವಾಗುದರಲ್ಲಿ ಯಾವುದೇ ಅನುಮಾನವಿಲ್ಲ.

error: Content is protected !!
Scroll to Top