ಉಡುಪಿ: ನಿಂತಿದ್ದ ಕಾರಿಗೆ ರಿಕ್ಷಾ ಢಿಕ್ಕಿ ➤ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಅ. 20. ನಿಂತಿದ್ದ ಕಾರಿಗೆ ರಿಕ್ಷಾವೊಂದು ಡಿಕ್ಕಿಯಾಗಿ, ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುಂಡಿಬೈಲ್‌ ಎಂಬಲ್ಲಿ ನಡೆದಿದೆ.

ಮೃತರನ್ನು ಮೂಡುಬೆಟ್ಟಿನ ಸುನಿಲ್ (44) ಎಂದು ಗುರುತಿಸಲಾಗಿದೆ. ಅಂಬಾಗಿಲಿನಿಂದ ಉಡುಪಿ ಕಡೆಗೆ ಬರುತ್ತಿದ್ದ ರಿಕ್ಷಾವೊಂದು ಗುಂಡಿಬೈಲ್‌ ನಾಗನ ಕಟ್ಟೆ ಬಳಿ ಪಾರ್ಕ್ ಮಾಡಲಾಗಿದ್ದ ಝೆನ್ ಕಾರಿಗೆ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ ಚಾಲಕ ರಸ್ತೆಗೆ ಎಸೆಯಲ್ಪಟ್ಟಿದ್ದು, ಇವರ ಮೇಲೆ ರಿಕ್ಷಾ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಸುನಿಲ್ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ರಿಕ್ಷಾದಲ್ಲಿ ಮತ್ತೋರ್ವ ಪ್ರಯಾಣಿಕರಿದ್ದು, ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Also Read  ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 1256 ಜನರ ಮೇಲಿನ ರೌಡಿ ಶೀಟ್ ರದ್ದು..! ➤ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಿ- ಕಮಿಷನರ್ ಶಶಿಕುಮಾರ್

error: Content is protected !!
Scroll to Top