ಅಕ್ರಮವಾಗಿ ಸಾಗಿಸುತ್ತಿದ್ದ 30 ಕೋಣಗಳ ರಕ್ಷಣೆ ➤ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಸಕಲೇಶಪುರ . 20: ಅಕ್ರಮವಾಗಿ ಸಾಗಿಸುತ್ತಿದ್ದ 30 ಕೋಣಗಳನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ.  ಹರಿಯಾಣ ರಾಜ್ಯದ ನೋಂದವಣಿಯ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 30 ಕೋಣಗಳನ್ನು ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು ಸಕಲೇಶಪುರದ ಮಾರನಹಳ್ಳಿ ಬಳಿ ನಡೆದಿದೆ.

ಆರೋಪಿಗಳು ಹರಿಯಾಣ ಮೂಲದ ವಿಕಾಸ್ (25) ಹಾಗೂ ಅನಿಲ್ ಕುನಾರ್ (30) ಎಂದು ತಿಳಿದು ಬಂದಿದೆ.ಇನ್ನು ಯಾರಿಗೂ ಅನುಮಾನ ಬಾರದಂತೆ ಲಾರಿಯಲ್ಲಿ ಟಾರ್ಪಲ್ ಹಾಕಿ ಕೋಣಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಗ್ರಾಮಾಂತರ ಠಾಣೆ ಪಿ ಎ ಐ ಚಂದ್ರಶೇಖರ್ ನೇತೃತ್ವದ ತಂಡದವರು ತಕ್ಷಣ ಲಾರಿಯನ್ನು ಪರಿಶೀಲಿಸಿ ಇಬ್ಬರು ಚಾಲಕರನ್ನು ಬಂಧಿಸಿದ್ದಾರೆ. ಹಾಗೂ 30 ಕೋಣಗಳನ್ನು ರಕ್ಷಿಸಿದ್ದಾರೆ. ಕೋಣಗಳನ್ನು ಉತ್ತರ ಪ್ರದೇಶದಿಂದ ಕೇರಳದ ಪಾಲಕ್ಕಾಡ್ ಗೆ ಕಳುಹಿಸುತ್ತಿದ್ದರು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Also Read  ಮೂವರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ

 

 

 

error: Content is protected !!
Scroll to Top