ಸವಾರನ ಅಜಾಗರೂಕತೆಯಿಂದ ಸ್ಕೂಟರ್ ಪಲ್ಟಿ ➤ ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು  . 19: ಸ್ಕೂಟರ್ ಸವಾರನ ಅಜಾಗರೂಕತೆಯಿಂದ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್  ಹತೋಟಿ ತಪ್ಪಿ ಸ್ಕಿಡ್ ಆಗಿ ಸ್ಕೂಟರ್ ಸವಾರರಿಬ್ಬರಿಗೂ ಗಾಯಗಳಾದ ಘಟನೆ ಶವಿವಾರದಂದು ಪುತ್ತೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

ಹಿತೇಶ್ ಎಂಬಾತ ತನ್ನ ಸ್ಕೂಟರ್ ನಲ್ಲಿ ಶ್ರೀ ಚೇತನ್ ಎಂಬಾತನನ್ನು ಕುಳ್ಳಿರಿಸಿಕೊಂಡು ಮಾಡತ್ತಾರು-ಕಲ್ಲೇಗ ಸಾರ್ವಜನಿಕ ರಸ್ತೆಯಲ್ಲಿ ಶೇವಿರೆ ಕಡೆಯಿಂದ ನೆಹರೂನಗರ ಕಡೆಗೆ ಚಲಾಯಿಸಿಕೊಂಡು ಹೋಗಿದ್ದಾರೆ, ಬಳಿಕ ಕಬಕ ಗ್ರಾಮದ ಕಲ್ಲೇಗ ಎಂಬಲ್ಲಿ ತಿರುವು ರಸ್ತೆಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷ್ಯ ತನದಿಂದ ಚಲಾಯಿಸಿ ತಕ್ಷಣ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಸವಾರನ ಹತೋಟಿಗೆ ಸಿಗದೆ, ಸ್ಕಿಡ್ ಆಗಿ ಸ್ಕೂಟರ್ ಸಮೇತ ಸವಾರ ಮತ್ತು ಸಹಸವಾರ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ಶ್ರೀಚೇತನ್ ಹಾಗೂ ಹಿತೇಶ್ ರವರಿಗೆ ಮೊಣಕಾಲಿಗೆ ಹಾಗೂ ಬೆರಳುಗಳಿಗೆ ಗಾಯಗಳಾಗಿದೆ. ಚಿಕಿತ್ಸೆಗಾಗಿ ಪುತ್ತೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತ್ಯು

 

 

error: Content is protected !!
Scroll to Top