ಹಿಸಾಂತ್ಮಕವಾಗಿ ದನ ಕರುಗಳ ಸಾಗಾಟ ➤ ಓರ್ವ ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಪುಂಜಾಲಕಟ್ಟೆ . 18: ಜಾನುವಾರುಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಜಾಲವೊಂದನ್ನು ಶನಿವಾರ ರಾತ್ರಿ ಪುಂಜಾಲಕಟ್ಟೆ ಪೊಲೀಸರು ಪತ್ತೆ ಹಚ್ಚಿದ್ದು, ಜಾನುವಾರುಗಳ ಸಹಿತ ಸಾಗಾಟಕ್ಕೆ ಬಳಸಿದ ವಾಹನಗಳನ್ನು ವಶ ಪಡಿಸಿಕೊಂಡಿದ್ದಾರೆ.

ಕಾವಳಮೂಡೂರು ಗ್ರಾಮದ ಎನ್.ಸಿ .ರೋಡ್‌ನಲ್ಲಿ ಕಾಡು ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಅಮಾನವೀಯವಾಗಿ ಕೂಡಿ ಹಾಕಿ ವಾಹನಗಳಲ್ಲಿ ಸಾಗಾಟಕ್ಕೆ ಪ್ರಯತ್ನಿಸುತ್ತಿದ್ದ ವೇಳೆ ಪುಂಜಾಲಕಟ್ಟೆ ಎಸ್‌ಐ ಸೌಮ್ಯಾ ಜೆ. ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.ಬೊಲೆರೊ ಜೀಪ್, ಆಮ್ನಿ ಕಾರು, ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ವಾಹನದಲ್ಲಿದ್ದ 7 ದನ ಹಾಗೂ 9 ಕರುಗಳನ್ನು ರಕ್ಷಣೆ ಮಾಡಲಾಗಿದೆ. ದಾಳಿ ನಡೆಸಿ ವೇಳೆ ಓರ್ವ ಆರೋಪಿ ಪೊಲೀಸರ ಕೈಗೆ ಸಿಕ್ಕ ಬಿದ್ದಿದ್ದು, ಉಳಿದವರು ಪರಾರಿಯಾಗಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ➤ ಮಾಜಿ ಪ್ರಧಾನಿ ದೇವೆಗೌಡ ಹಾಗೂ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು

error: Content is protected !!
Scroll to Top