ಕಡಬ ಪರಿಸರದಲ್ಲಿ ನಿರಂತರವಾಗಿ ವಿದ್ಯುತ್ ಸ್ಥಗಿತ ಹಿನ್ನಲೆ ➤ ವಿದ್ಯುತ್ ಸಮಸ್ಯೆ ಸರಿದೂಗಿಸುವಂತೆ ಕಡಬ ವಲಯ ಕಾಂಗ್ರೆಸ್ ಸಮಿತಿ ಮನವಿ

(ನ್ಯೂಸ್ ಕಡಬ) newskadaba.com ಕಡಬ . 17: ಕಡಬ ಪರಿಸರದಲ್ಲಿ ನಿರಂತರವಾಗಿ ವಿದ್ಯುತ್ ಸ್ಥಗಿತವಾಗುವುದರಿಂದ ಗ್ರಾಹಕರು ಉದ್ದಿಮೆದಾರರು ವರ್ತಕರು ಕೆಂಗೆಟ್ಟು ಹೋಗಿದ್ದಾರೆ. ಸರಿಯಾದ ಸಮಯಕ್ಕೆ ಕರೆಂಟ್ ಇಲ್ಲದೆ ಸಂಕಷ್ಟಕ್ಕೆ ಜನ ಸಿಲುಕಿದ್ದಂತಾಗಿದ್ದಾರೆ. ಇದರಿಂದ ಈಗಾಗಲೇ ಸಾರ್ವಜನಿಕರು ಆಕ್ರೊಶಗೊಂಡಿದ್ದಾರೆ. ಇದರಿಂದಾಗಿ ಇಂದು ಕಡಬ ವಲಯ ಕಾಂಗ್ರೇಸ್ ಸಮಿತಿ ಸದಸ್ಯರು ಕಡಬದ ಮೆಸ್ಕಾಂ ಉಪ ವಿಭಾಗಕ್ಕೆ ವಿದ್ಯುತ್ ಸರಿಪಡಿಸುವುದಕ್ಕಾಗಿ ಮನವಿ ಸಲ್ಲಿಸಿದರು.

 

ಇದರ ಜೊತೆಗೆ, ಈ ಸಮಸ್ಯೆ ಒಂದು ವಾರದೊಳಗೆ ಸರಿ ಪಡಿಸಿಕೊಡುವಂತೆ ಆಗ್ರಹಿಸಿದ್ದಾರೆ, ತಪ್ಪಿದ್ದಲ್ಲಿ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.  ಇನ್ನು, ಈ ಸಂದರ್ಭದಲ್ಲಿ ಕಡಬ ವಲಯ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಶೇಡಿಗುಂಡಿ, ಸಿಎ ಬ್ಯಾಂಕ್ ನಿದೇರ್ಶಕರಾದ ಸತೀಶ್ ನಾಯ್ಕ್. ಡಿಸಿಸಿ ಬ್ಯಾಂಕ್ ಸದಸ್ಯರಾದ ಶರೀಫ್ ಮನೋಜ್ ಕೃಷ್ಣ ಬಳ್ಳೇರಿ, ಮುಕ್ತಾರ್ ಮೂಲೆಮನೆ, ಕಡಬ ಗ್ರಾಮ ಪಂ.ಮಾಜಿ ಅಧ್ಯಕ್ಷ ಬಾಬು ಮುಗೇರ ಮುಂತಾದವರು ಉಪಸ್ಥಿತರಿದ್ದರು.

Also Read  ಕರಾವಳಿಯಲ್ಲಿ ಮುಂದುವರಿದ ವರುಣನ ರುಧ್ರನರ್ತನ➤ ಚಾರ್ಮಾಡಿ ತಪ್ಪಲಿನ ಗ್ರಾಮಗಳಲ್ಲಿ ನೆರೆ ಭೀತಿ

 

 

error: Content is protected !!
Scroll to Top