ದೊಡ್ಡತೋಟ ತಲುಪುತ್ತಿದ್ದಂತೆ ಬಸ್‌ ‌ಅಪಘಾತ ➤ ಪ್ರಯಾಣಿಕರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಅ.17: ಬಸ್‌ ನ ಟಯರ್‌ ಒಡೆದ ಪರಿಣಾಮ ಬಸ್‌ ನೊಳಗಿದ್ದ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ದೊಡ್ಡತೋಟ ಎಂಬಲ್ಲಿ ನಡೆದಿದೆ.

 

 

ಮೈಸೂರಿನಿಂದ ಬರುವ ಸರಕಾರಿ ಬಸ್ಸೊಂದು ದೊಡ್ಡತೋಟ ತಲುಪುತ್ತಿದ್ದಂತೆ ಬಸ್‌ನ ಹಿಂಬದಿಯ ಟಯರ್‌ ಒಡೆದು ಹೋಗಿ ಟಯರ್‌ ಬಸ್ಸಿನ ಅಡಿ ಭಾಗಕ್ಕೆ ಗುದ್ದಿದ ಪರಿಣಾಮದಿಂದಾಗಿ, ಸೀಟಿನಲ್ಲಿ ಕುಳಿತುಕೊಂಡ ಇಬ್ಬರ ಕಾಲಿಗೆ ಗಾಯಗೊಂಡ ಘಟನೆ ಇಂದು ನಡೆದಿದೆ. ಗಾಯಾಳುಗಳನ್ನು ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿಸಿದ್ದಾರೆ.

 

Scroll to Top