ಮಂಗಳೂರು ದಸರಾ: ಉದ್ಘಾಟನೆಗೆ ಕೋವಿಡ್ ವಾರಿಯರ್ ಡಾ ಆರತಿ ಕೃಷ್ಣ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 16:   ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅ.17ರಿಂದ ಆರಂಭವಾಗಲಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಕೋವಿಡ್ ವಾರಿಯರ್, ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ ಆರತಿ ಕೃಷ್ಣ ಚಾಲನೆ ನೀಡಲಿದ್ದಾರೆ.

 

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರ ಆಶಯದಂತೆ ಮಂಗಳೂರು ದಸರಾ ಮಹೋತ್ಸವವು ‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಕೋವಿಡ್-19 ವಾರಿಯರ್ ಆಗಿ ಅವಿರತ ಶ್ರಮಿಸಿದ ಡಾ ಆರತಿಕೃಷ್ಣ ಅವರನ್ನು ಮಂಗಳೂರು ದಸರಾ ಮಹೋತ್ಸದ ಚಾಲನೆಗೆ ಆಮಂತ್ರಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಇವರು

Also Read  ಕಿರಿಮಂಜೇಶ್ವರ ಕೊಡೆರಿಯಲ್ಲಿ ದೋಣಿ ದುರಂತ ➤ ಮೃತಪಟ್ಟ 4 ಮೀನುಗಾರರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿ.ಎಂ

ಸುಮಾರು 6 ತಿಂಗಳಿಂದೀಚೆಗೆ 40ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯರನ್ನು ವಿದೇಶದಿಂದ ತಾಯ್ನಾಡಿಗೆ ಕರೆತರುವಲ್ಲಿ ಯಶಸ್ವಿಯಾದರು. ಎನ್‌ಆರ್‌ಐ ಸಂಸ್ಥೆಗಳಿಗೆ ಚಾರ್ಟರ್ ವಿಮಾನಕ್ಕೆ ಬೇಕಾದ ಅನುಮತಿಯನ್ನು ರಾಯಭಾರಿ ಕಚೇರಿ ಮೂಲಕ ಒದಗಿಸಿಕೊಡಲು ಇವರು ಶ್ರಮಿಸಿದ್ದರು.ತಮ್ಮ ಸೇವೆಯಲ್ಲಿ ಯಾವತ್ತೂ ಅಪೇಕ್ಷೆ – ಪ್ರಚಾರ ಬಯಸದೆ ಇಡೀ ಜೀವನವನ್ನು ಇತರರಿಗೆ ಮುಡಿಪಾಗಿಟ್ಟು ನೊಂದವರ ಪಾಲಿಗೆ ಆಸರೆಯಾಗಿದ್ದರು.

 

error: Content is protected !!
Scroll to Top