ಬೈಂದೂರು : ಕಾರಿನೊಳಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಚಾಲಕ



(ನ್ಯೂಸ್ ಕಡಬ) newskadaba.com ಬೈಂದೂರು ಅ. 16:  ಕಾರು ಚಾಲಕನೋರ್ವ ಕಾರಿನಲ್ಲಿಯೇ ವಿಷ ಸೇವಿಸಿ ಆತ್ಮ ಹತ್ಯೆಗೆ ಶರಣಾದ ಘಟನೆ ಇಂದು ನಡೆದಿದೆ. ಆತ್ಮ ಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ನಾಗರಾಜ (23) ಎಂದು ತಿಳಿದು ಬಂದಿದೆ.





 

 

ಇವರು ಪಡುವರಿ ಗ್ರಾಮದ ನಿವಾಸಿಯಾಘಿದ್ದು, ಕಳೆದ ಹಲವಾರು ವರುಷಗಳಿಂದ ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅ.12 ರಂದು ಮನೆಯಲ್ಲಿ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಾಡಿಗೆ ಹಿನ್ನೆಲೆಯಲ್ಲಿ ತೆರಳುವುದಾಗಿ ತಿಳಿಸಿ ಹೋಗಿದ್ದಾರೆ. ಆದರೆ ಗುರುವಾರದಂದು ಮೃತ ರ ಸಹೋದರರಿಗೆ ಪರಿಚಿತರೊಬ್ಬರು ಕರೆ ಮಾಡಿ ನಾಗರಾಜ ಆತ್ಮ ಹತ್ಯೆ ಮಾಡಿಕೊಂಡ ರೀತಿಯಲ್ಲಿ ಕಾರಿನಲ್ಲಿ ಬಿದ್ದುಕೊಂಡಿದ್ದಾರೆ ಎಂದು ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

error: Content is protected !!
Scroll to Top