ಮಣಿಪಾಲ ಪೊಲೀಸರಿಂದ ಡ್ರಗ್ ಪೆಡ್ಲರ್ ಬಂಧನ ➤ ರೂ. 4.63 ಲಕ್ಷ ಮೌಲ್ಯದ ಮಾದಕ ವಸ್ತು ವಶಕ್ಕೆ

(ನ್ಯೂಸ್ ಕಡಬ) newskadaba.com ಮಣಿಪಾಲ, . 15: ಮಣಿಪಾಲ ಪೊಲೀಸರು ಬುಧವಾರ ಒರ್ವ ವ್ಯಕ್ತಿಯನ್ನು ಬಂಧಿಸಿ ರೂ 4.63 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತುಗಳಾದ 54 ನಿಷೇದಿತ ಮಾತ್ರೆಗಳು, 30 ಗ್ರಾಂ ಬ್ರೌನ್ಶುಗರ್ ವಶಪಡಿಸಿಕೊಂಡಿದ್ದಾರೆ.

ಬಂಧಿತ ವ್ಯಕ್ತಿಯನ್ನು ಬ್ರಹ್ಮಾವರ ಫಜಲ್ ಎಂದು ಗುರುತಿಸಲಾಗಿದೆ.ನಿಷೇದಿತ ಮಾದಕ ವಸ್ತುಗಳನ್ನು ಬ್ರಹ್ಮಾವರದಿಂದ ಮಣಿಪಾಲಕ್ಕೆ ಮಾರಾಟ ಮಾಡಲು ಬಂದಿರುವುದಾಗಿ ನೀಡಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಪೊಲೀಸರು ಆರೋಪಿಯಿಂದ 2 ಮೊಬೈಲ್ಪೋನ್ಗಳು, 54 ನಿಷೇದಿತ  ಮಾತ್ರೆಗಳು, 30 ಗ್ರಾಂ ಬ್ರೌನ್ಶುಗರ್, ಆಂದಾಜು ಮೌಲ್ಯ 4,63,600 ರೂಪಾಯಿ ವಶಪಡಿಸಿಕೊಂಡಿದ್ದಾರೆ.ಫಜಲ್ ನನ್ನು ವಿಚಾರಣೆ ನಡೆಸಿದಾಗ ಆತ ಹಾಗೂ ತನ್ನ ಸ್ನೇಹಿತರಾದ ಉಡುಪಿಯ ಫರ್ಹಾನ್ ಮತ್ತು ಸಫಾ ಮೂವರು ಸೇರಿ ಕೆಲವು ಡ್ರಗ್ಸ್ ಮಾತ್ರೆ ಹಾಗೂ ಬ್ರೌನ್ಶುಗರ್ನ್ನು ಆನ್ಲೈನ್ನ್ನಲ್ಲಿ ಖರೀಧಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ,ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮುಖ್ಯಮಂತ್ರಿಯ ಸ್ಪೆಷಲ್ ಆಫೀಸರ್ ಎಂದು ಹೇಳಿ ಸರಕಾರಿ ಲಾಂಛನವಿರುವ ಕಾರಿನಲ್ಲಿ ಸುತ್ತಾಡುತ್ತಿದ್ದ ಖತರ್ನಾಕ್..! ➤ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ವಂಚನೆ ಮಾಡಿದ ಬಾಳೆಕಾಯಿ ವ್ಯಾಪಾರಿ

 

error: Content is protected !!
Scroll to Top