ಮಾಧ್ಯಮಗಳಿಗೆ ಜಾಹಿರಾತು ನೀಡದಿರಲು “ಪಾರ್ಲೆ -ಜಿ ” ನಿರ್ಧಾರ

(ನ್ಯೂಸ್ ಕಡಬ) newskadaba.com ಮುಂಬೈ  . 13: ಪಾರ್ಲೆ-ಜಿ ಬಿಸ್ಕೆತ್‌ ತಯಾರಕರಾದ ಪಾರ್ಲೆ ಹಾಗೂ ಬಜಾಜ್ ಸಂಸ್ಥೆಗಳು ವಿಷಕಾರಿ ಚಿಂತನೆಗಳನ್ನು, ಧ್ವೇಷವನ್ನು ಹರಡುವ ಹಾಗೂ ಟಿಆರ್‌ಪಿ ಹಗರಣದಲ್ಲಿ ಭಾಗಿಯಾದ ಭಾರತೀಯ ನ್ಯೂಸ್‌ ಚಾನೆಲ್‌ಗಳಿಗೆ ತಮ್ಮ ಜಾಹಿರಾತನ್ನು ನೀಡದಿರಲು ನಿರ್ಧಾರ ಮಾಡಿದೆ.

 

ಟಿಆರ್‌ಪಿ ಹಗರಣದಲ್ಲಿ ಭಾಗಿಯಾದ ಹಾಗೂ ಸಮಾಜಕ್ಕೆ ಕೆಟ್ಟ ಸಂದೇಶಗಳನ್ನು, ವಿಚಾರಗಳನ್ನು ಹರಡುವ ನ್ಯೂಸ್‌ ಚಾನೆಲ್‌ಗಳಿಗೆ ಇನ್ನುಮುಂದೆ ಸಂಸ್ಥೆಯು ಜಾಹಿರಾತು ನೀಡುವುದಿಲ್ಲ ಎಂದು ತೀರ್ಮಾನಿಸಿದೆ ಎಂದು ಪಾರ್ಲೆಯ ಹಿರಿಯ ಮುಖ್ಯಸ್ಥ ಕೃಷ್ಣರಾವ್‌ ಬುದ್ದ ಹೇಳಿದ್ದಾರೆ.ಇತರ ಜಾಹಿರಾತುದಾರರು ಕೂಡಾ ಈ ನಿರ್ಧಾರ ತೆಗೆದುಕೊಂಡರೆ ವಿಷಕಾರಿ ವಿಷಯಗಳನ್ನು, ಧ್ವೇಷವನ್ನು ಹರಡುವ ಸುದ್ದಿ ಸಂಸ್ಥೆಗಳು ತಮ್ಮ ಪ್ರಸಾರದ ವಿಷಯವನ್ನು ಬದಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ ಎಂದು ಕೃಷ್ಣ ಬುದ್ಧ ಅಭಿಪ್ರಾಯಪಟ್ಟಿದ್ದಾರೆ.

Also Read  ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದ ಖರ್ಗೆ

error: Content is protected !!
Scroll to Top