ನೆಲ್ಯಾಡಿ: ಆಸಿಡ್ ದಾಳಿಗೆ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಅ. 10. ಕೌಟುಂಬಿಕ ಕಲಹದ ಹಿನ್ನೆಲೆ ಪತಿಯೋರ್ವ ತನ್ನ ಪತ್ನಿಗೆ ಹಾಗೂ ಆಕೆಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಸೆ.24ರಂದು ನಡೆದಿದ್ದು, ಇದೀಗ ಅರೋಪಿಯ ಪತ್ನಿ ಶೈನಿ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ನೆಲ್ಯಾಡಿ ನಿವಾಸಿ ಬಿಜು(38) ಎಂಬಾತ ತನ್ನ ಪತ್ನಿ ಶೈನಿ(33) ಹಾಗೂ ಆಕೆಯ ಚಿಕ್ಕಮ್ಮ ಝಾನ್ಸಿ(36) ಎಂಬವರ ಮೇಲೆ ಆ್ಯಸಿಡ್ ಎರಚಿದ್ದು, ಇದರಿಂದಾಗಿ ಇಬ್ಬರ ಮುಖ ಹಾಗೂ ಕಣ್ಣಿನ ಭಾಗ ಸುಟ್ಟುಹೋಗಿದ್ದರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಲ್ಲಿ ಝಾನ್ಸಿ ಎಂಬವರು ಚಿಕಿತ್ಸೆ ಪಡೆದು ಗುಣಮುಖರಾದೃ, ಗಂಭೀರ ಗಾಯಗೊಂಡ ಶೈನಿ ಎಂಬವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Scroll to Top