ಕಡಬ: 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಕುಟ್ರುಪಾಡಿ ಗ್ರಾ.ಪಂ. ಆಯ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ. 29. 2019-20ನೇ ಸಾಲಿನ ಗಾಂಧಿಗ್ರಾಮ ಪುರಸ್ಕಾರಕ್ಕೆ ಪುತ್ತೂರು ತಾಲ್ಲೂಕಿನ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಹಾಗೂ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಗಳು ಆಯ್ಕೆಯಾಗಿದೆ.

2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಪಂಚಾಯಿತಿಗಳ ಆಯ್ಕೆಯ ಕುರಿತು ಉಲ್ಲೇಖ ಪತ್ರದಲ್ಲಿ ಸೂಚಿಸಿದಂತೆ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಜಿಲ್ಲೆಯ ಪ್ರತೀ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿ ನೀಡಿದ ಮಾಹಿತಿಯಂತೆ, ಆಯುಕ್ತರು ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಇದರ ಆದೇಶದಂತೆ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯವರ ಆದೇಶದಲ್ಲಿ ತಿಳಿಸಿದ್ದಾರೆ.

Also Read  ಉಪ್ಪಳ: ದಿ.ಶರೀಫ್ ಅರಿಬೈಲು ಸ್ಮರಣಾರ್ಥ ಯೂತ್ ಕಾಂಗ್ರೆಸ್ ರಕ್ತದಾನ ಶಿಬಿರ ಉದ್ಘಾಟನೆ ➤ ರಕ್ತದಾನವು ಮಹಾಶ್ರೇಷ್ಠ ದಾನವಾಗಿದೆ- ರಾಜ್ ಮೋಹನ್ ಉಣ್ಣಿತ್ತಾನ್

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮತ್ತು ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್, ಮಂಗಳೂರು ತಾಲೂಕಿನ ಮುನ್ನೂರು, ಮೂಡಬಿದ್ರೆಯ ಬೆಳುವಾಯಿ, ಬಂಟ್ವಾಳದ ಕೊಳ್ನಾಡು, ಬೆಳ್ತಂಗಡಿಯ ಅಂಡಿಂಜೆ, ಸುಳ್ಯ ತಾಲೂಕಿನ ಐರ್ವನಾಡು ಗ್ರಾಮ ಪಂಚಾಯತ್ ಗಳನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿ ಆದೇಶ ನೀಡಲಾಗಿದೆ.

error: Content is protected !!
Scroll to Top