(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 27: ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ಪರೀಕ್ಷೆ ಸೆ.25ರಂದು ಎಲ್ಲ ಕಡೆಯೂ ನಡೆದಿದೆ, ಆದರೆ ವಿವಿ ಕ್ಯಾಂಪಸ್‌ನಲ್ಲೇ ನಡೆದಿಲ್ಲ ಎಂಬುವುದು ವಿಪರ್ಯಾಸ.
ಕ್ಯಾಂಪಸ್‌ನ ಕನ್ನಡ ವಿಭಾಗದ ಪ್ರೊಫೆಸರ್ ಮಾಡಿಕೊಂಡ ಗೊಂದಲದಿಂದಾಗಿ ಪ್ರೊ.ಎಸ್.ವಿ.ಪಿ ಅಧ್ಯಯನ ಕೇಂದ್ರದಲ್ಲಿ ಕನ್ನಡ ಪರೀಕ್ಷೆ ನಡೆಯಲೇ ಇಲ್ಲ. ಅಲ್ಲಿ ವಿದ್ಯಾರ್ಥಿಗಳಿಗೆ ವಿಭಾಗದ ಪ್ರೊಫೆಸರ್ ಸೆ.26ರಂದು ಪರೀಕ್ಷೆ ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. 21ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮಳೆ ಕಾರಣಕ್ಕೆ 25ರಂದು ನಡೆಸಲು ತೀರ್ಮಾನಿಸಲಾಗಿತ್ತು.
ಆದರೆ ಪ್ರೊ.ಎಸ್.ವಿ.ಪಿ ಅಧ್ಯಯನ ಕೇಂದ್ರದವರು ಮಾತ್ರ ನಮಗೆ ವಿಶ್ವವಿದ್ಯಾಲಯ ಮಾಹಿತಿ ಕೊಟ್ಟಿಲ್ಲ ಎಂದು ಪರೀಕ್ಷೆಯನ್ನೇ ನಡೆಸಿಲ್ಲ. ಪ್ರಶ್ನೆಪತ್ರಿಕೆ ಬಂದಿಲ್ಲ ಎಂದು ದೂರುತ್ತಿದ್ದಾರೆ. ಆದರೆ ವಿವಿ ಆಡಳಿತದ ಬಳಿ ವೇಳಾಪಟ್ಟಿ ಕಳಿಸಿರುವುದು, ಪ್ರಶ್ನೆಪತ್ರಿಕೆ ಕೊಟ್ಟಿರುವುದಕ್ಕೆ ದಾಖಲೆ ಇದೆ ಎಂದು ಪರೀಕ್ಷಾಂಗ ರಿಜಿಸ್ಟ್ರಾರ್ ಪ್ರೊ.ಪಿ.ಎಲ್.ಧರ್ಮ ತಿಳಿಸಿದರು.