ಕೋಟ್ಯಾಂತರ ಅಭಿಮಾನಿಗಳ ಕಣ್ಣೀರ ವಿದಾಯ ➤ ಭೂಮಿ ತಾಯಿಯ ಮಡಿಲು ಸೇರಿದ ಗಾನಯೋಗಿ

(ನ್ಯೂಸ್ ಕಡಬ) newskadaba.com ತಿರುವಳ್ಳೂರ್, ಸೆ. 26:  ತಮಿಳು ನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂ ಎಂಬಲ್ಲಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ರೆಡ್ ಹಿಲ್ಸ್ ಫಾರ್ಮ್ ಹೌಸ್ ನಲ್ಲಿ ಅವರ ಅಂತಿಮ ಯಾತ್ರೆಯ ವಿಧಿ ವಿಧಾನ ಕಾರ್ಯಗಳು, ಧಾರ್ಮಿಕ ಸಂಪ್ರದಾಯಗಳು ನೆರವೇರಿತು. ಸಂಪೂರ್ಣ ಪೊಲೀಸ್ ಗೌರವದೊಂದಿಗೆ ಗಾನಯೋಗಿ ಗೆ ವಿದಾಯ ಹೇಳಲಾಯಿತು.

 

 

ಎಸ್ ಪಿಬಿಯವರ ಪುತ್ರ ಹಿನ್ನೆಲೆ ಗಾಯಕ ಎಸ್ ಪಿ ಚರಣ್ ತಂದೆಯ ಅಂತಿಮ ಯಾತ್ರೆಯ ವಿಧಿ ವಿಧಾನಗಳನ್ನು ಶೈವ ಸಂಪ್ರದಾಯದಂತೆ ಕುಟುಂಬದ ಇತರ ಸದಸ್ಯರ ಸಮ್ಮುಖದಲ್ಲಿ ನೆರವೇರಿಸಿದರು. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಸರ್ಕಾರದ ಜನಪ್ರತಿನಿಧಿಗಳು, ಗಣ್ಯರು ಸೇರಿದ್ದರು. ತಮ್ಮ ನೆಚ್ಚಿನ ಗಾಯಕನನ್ನು ಅಂತಿಮವಾಗಿ ದುಃಖಭರಿತ, ಭಾರವಾದ ಹೃದಯದಿಂದ, ಸಕಲ ಸರ್ಕಾರಿ ಗೌರವಗಳೊಂದಿಗೆ ಕೋಟ್ಯಾಂತರ ಅಭಿಮಾನಿಗಳ ಕಣ್ಣೀರ ವಿದಾಯ ಮೂಲಕದ, ಭೂಮಿ ತಾಯಿಯ ಮಡಿಲು ಸೇರಿದ ಗಾನಯೋಗಿ.

Also Read  ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್‌ಗೆ ಕೊರೋನ ಪಾಸಿಟಿವ್

 

 

error: Content is protected !!
Scroll to Top