ಗುತ್ತಿಗಾರು : ಸಿಕ್ಕಿಬಿದ್ದ ಚಿನ್ನದ ಸರವನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಯುವಕ

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಸೆ. 26: ಗುತ್ತಿಗಾರಿನ ಯುವಕರೊಬ್ಬರಿಗೆ ಲಕ್ಷಾಂತರ ಮೌಲ್ಯದ ಚಿನ್ನದ ಸರವೊಂದು ಬಿದ್ದು ಸಿಕ್ಕಿತ್ತು. ಬಳಿಕ ಅದನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

 

ನಡುಗಲ್ಲಿನಿಂದ ಗುತ್ತಿಗಾರು ಮಾರ್ಗವಾಗಿ ಪಂಜಕ್ಕೆ ಹೋಗುತ್ತಿದ್ದ ನವರತ್ನ ಮೊಬೈಲ್ ಶಾಪ್ ನ ಮಾಲಕ ಪ್ರದೀಪ್ ಅಂಬೆಕಲ್ಲು ರವರ ಸುಮಾರು ಒಂದು ಲಕ್ಷ ರೂ ಮೌಲ್ಯದ ಚಿನ್ನದ ಸರ ಕಳೆದ ದಿನ ಬಿದ್ದು ಹೋಗಿದ್ದ ಘಟನೆ ನಡೆದಿತ್ತು. ಗುತ್ತಿಗಾರಿನ ಇಂಡಿಯನ್ ಪೆಟ್ರೋಲ್ ಪಂಪಲ್ಲಿ ಪೆಟ್ರೋಲ್ ತುಂಬಿಸಲು ಬಂದಿದ್ದ ಆಶಾಕಿರಣ್ ಎಂಬುವವರಿಗೆ ಈ ಸರ ಸಿಕ್ಕಿತ್ತು.

 

 

ಅದನ್ನು ಪೆಟ್ರೋಲ್ ಪಂಪ್ ಸಿಬ್ಬಂದಿಗಳ ಕೈಯಲ್ಲಿ ಕೊಟ್ಟು ಅವರು ವಾಪಾಸ್ಸಾಗಿದ್ದರು. ಇಂದು ವಾಟ್ಸಾಪ್ ಗ್ರೂಪ್ ನಲ್ಲಿ ಚಿನ್ನದ ಸರ ಕಳೆದು ಹೋಗಿರುವ ಕುರಿತು ಸಂದೇಶವನ್ನು ನೋಡಿದ ಆಶಾಕಿರಣ್ ರವರು ಪ್ರದೀಪ್ ಅಂಬೆಕಲ್ಲು ಅವರನ್ನು ಸಂಪರ್ಕಿಸಿ ಚಿನ್ನದ ಸರ ಸಿಕ್ಕಿರುವ ಬಗ್ಗೆ ತಿಳಿಸಿ, ಅದನ್ನ ಪೆಟ್ರೋಲ್ ಪಂಪ್ ನ ಸಿಬ್ಬಂದಿ ಬಳಿ ನೀಡಿರುವ ಬಗ್ಗೆ ತಿಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅಷ್ಟೆ ಅಲ್ಲದೆ ಎರಡು ವರುಷಗಳ ಹಿಂದೆ ಆಶಾಕಿರಣ್ ರವರಿಗೆ ಸುಮಾರು ನಲವತ್ತು ಸಾವಿರ ನಗದು ಇದ್ದ ಪರ್ಸ್ ಸಿಕ್ಕಿದ್ದು,ಅದನ್ನು ಮಾಲಕರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದರು. ಯುವಕನ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Also Read  ಕಸ್ತೂರಿ ರಂಗನ್ ವರದಿ ➤ ಶಿರಾಡಿ ಗ್ರಾಮವನ್ನು ಕೈಬಿಡುವಂತೆ ಜಿಲ್ಲಾಧಿಕಾರಿಗೆ ಮನವಿ

 

 

 

error: Content is protected !!
Scroll to Top