ಉಪ್ಪಿನಂಗಡಿ: ಆ್ಯಸಿಡ್ ಎರಚಿ ಪರಾರಿಯಾದಾತ ಪೊಲೀಸ್ ಬಲೆಗೆ..‼️ ➤ ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.24. ಆ್ಯಸಿಡ್ ದಾಳಿ ನಡೆಸಿ ಪರಾರಿಯಾದ ಆರೋಪಿಯನ್ನು ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಉಪ್ಪಿನಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಂಬಿ ಹಿಂದೆ ನಿಲ್ಲಿಸಿದ್ದಾರೆ.

ಕಡಬ ತಾಲೂಕು ಕೊಣಾಲು ಗ್ರಾಮದ ಮಣ್ಣಮಜಲು ನಿವಾಸಿ ಬಿಜು ಥೋಮಸ್ ಎಂಬಾತ ಕುಡಿತದ ಚಟದಿಂದ ತನ್ನ ಪತ್ನಿ, ಮಗಳು ಹಾಗೂ ಪತ್ನಿಯ ಚಿಕ್ಕಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಅ್ಯಸಿಡ್ ಎರಚಿ ಪರಾರಿಯಾಗಿದ್ದ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ‌ಅರೋಪಿಯ ಬೆನ್ನುಬಿದ್ದ ಪೊಲೀಸರು ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆಯವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ಐ ಈರಯ್ಯ ಡಿ. ಎನ್. ರವರ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಬ್ಬಂದಿಗಳಾದ ಹರೀಶ್ ಗೌಡ, ಕೃಷ್ಣಪ್ಪ ನಾಯ್ಕ, ಹರಿಶ್ಚಂದ್ರ, ಗಣೇಶ್, ಸಂಗಯ್ಯ, ಇರ್ಷಾದ್, ಜಗದೀಶ್, ಚಂದ್ರಶೇಖರ್, ಪ್ರತಾಪ್, ನವೀನ್ ಭಾಗವಹಿಸಿದ್ದರು.

Also Read  ಬ್ರೆಜಿಲ್‌ಗೆ ಆಗಮಿಸಿದ ಪ್ರಧಾನಿ ಮೋದಿಗೆ ವೇದಮಂತ್ರಗಳ ಸ್ವಾಗತ

error: Content is protected !!
Scroll to Top