ಉನ್ನತ ವ್ಯಾಸಂಗಕ್ಕೆಂದು ಭಾರತಕ್ಕೆ ಬಂದ ➤ ಮಾದಕ ವಸ್ತು ಮಾರಾಟ ಮಾಡಿ ಸಿಕ್ಕಿಬಿದ್ದ.⁉️

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 23. ಉನ್ನತ ವ್ಯಾಸಂಗಕ್ಕೆಂದು ಬೆಂಗಳೂರಿಗೆ ಬಂದು ಎಂ.ಸಿ.ಎ ಪದವಿ ವ್ಯಾಸಂಗ ಮಾಡುತ್ತಿದ್ದು, ಇದರ ಜೊತೆಗೆ ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಬಿದ್ದು ಆರ್ಥಿಕ ಅಡಚಣೆಯಿಂದ ಮಾದಕ ವಸ್ತುಗಳ ಮಾರಾಟ ಆರಂಭಿಸಿದ್ದ ವಿದೇಶಿ ಪ್ರಜೆ ಸೇರಿ ಐದು ಮಂದಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ, ಸುಮಾರು 5 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೊಪಿಗಳನ್ನು ಸೂಡಾನ್ ದೇಶದ ಅಹಮ್ಮದ್ ಒಮರ್ (27), ತಾಬ್‍ ಶೇರ್(24), ಲಜೀಮ್(23), ಸೈಯದ್ ಶಕೀರ್(24), ಮೊಹಮ್ಮದ್ ಶಿಹಾಮ್ (28) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 50 ಗ್ರಾಂ ತೂಕದ 100 ಮಾದಕ ಮಾತ್ರೆಗಳು, 10 ಗ್ರಾಂ. ಎಂ.ಡಿ.ಎಂ.ಎ ಕ್ರೈಸ್ಟಲ್ ವಶವಡಿಸಿಕೊಂಡಿದ್ದು ಇವುಗಳ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಹೆಣ್ಣೂರು ವ್ಯಾಪ್ತಿಯ ಚೇಳಿಕೆರೆ, ಮೇಘನಾ ಪಾಳ್ಯದಲ್ಲಿರುವ ಸರ್ವೀಸ್ ಅಪಾರ್ಟ್ಮೆಂಟ್ ಒಂದರಲ್ಲಿ ಮಾದಕ ವಸ್ತು ಶೇಖರಿಸಿಟ್ಟುಕೊಂಡಿರುವ ಬಗ್ಗೆ ಮಾಹಿತಿ ಪಡೆದ ಹೆಣ್ಣೂರು ಪೊಲೀಸರು, ತಕ್ಷಣ ಕಾರ್ಯಪ್ರವೃತ್ತರಾಗಿ ಅಪಾರ್ಟ್‍ಮೆಂಟ್ ಮೇಲೆ ದಾಳಿ ಮಾಡಿ ಐದು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿಗೆ ಉನ್ನತ ವ್ಯಾಸಂಗಕ್ಕೆಂದು ಬಂದು ಎಂ.ಸಿ.ಎ ಪದವಿ ಮಾಡುತ್ತಿದ್ದ ಸಂದರ್ಭ ಮಾದಕ ವಸ್ತುಗಳ ಸೇವನೆಯ ಚಟಕ್ಕೆ ಬಿದ್ದು, ಬಳಿಕ ತಾನೇ ಮಾರಾಟಕ್ಕೆ ಪ್ರಾರಂಭಿಸಿದ್ದು, ಈತ ಆಫ್ರಿಕನ್ ಪ್ರಜೆಗಳಿಂದ ಮಾದಕ ವಸ್ತುಗಳನ್ನು ಖರೀದಿಸಿ ತನ್ನ ಜೊತೆ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಣೆ ಮಾಡುತ್ತಿದ್ದ ಎಂದು ಹೆಚ್ಚಿನ ತನಿಖೆಯ ವೇಳೆ ತಿಳಿದು ಬಂದಿದೆ.

error: Content is protected !!

Join the Group

Join WhatsApp Group