ವಿದ್ಯಾರ್ಥಿನಿಯ ಆನ್‌ಲೈನ್ ಶಿಕ್ಷಣಕ್ಕೆ ಲ್ಯಾಪ್‌ಟಾಪ್ ನೀಡಿದ ಇನ್‌ಫೋಸಿಸ್

(ನ್ಯೂಸ್ ಕಡಬ) newskadaba.com ಕುಂದಾಪುರ, ಸೆ. 23:  ಮಡಲು ಗೂಡಲ್ಲಿ ಕೂತು ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದ ಇಡೂರು ಕುಂಜ್ಞಾಡಿಯ ವಿದ್ಯಾರ್ಥಿನಿಗೆ ಇನ್ಫೋಸಿಸ್ ಸಂಸ್ಥೆ ಲ್ಯಾಪ್‌ಟಾಪ್ ಕೊಡುಗೆಯಾಗಿ ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದೆ.

 

ಬೈಂದೂರು ತಾಲೂಕು ಇಡೂರು ಕುಂಜ್ಞಾಡಿ ಗ್ರಾಮದ ಗೋಳಿಕೆರೆ ಗೋಪಾಲ ಗೌಡ ಮತ್ತು ಗೀತಾ ಮಕ್ಕಳಾದ ಹೆಬ್ರಿ ನವೋದಯ ಶಾಲೆ 10ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಹಾಗೂ 9ನೇ ತರಗತಿ ವಿದ್ಯಾರ್ಥಿ ಭರತ್ ಪ್ರತಿಭಾವಂತ ವಿದ್ಯಾರ್ಥಿಗಳು. ಮನೆ ಪರಿಸರದಲ್ಲಿ ಸೂಕ್ತ ನೆಟ್‌ವರ್ಕ್ ಸಿಗದೆ ಬೆಟ್ಟದ ನೆತ್ತಿಮೇಲೆ ಸಣ್ಣದೊಂದು ಚಪ್ಪರ ಮಾಡಿ ಅದರೊಳಗೆ ಆನ್‌ಲೈನ್ ಮೂಲಕ ಪಾಠ ಕೇಳುತ್ತಿದ್ದರು. ತಂದೆ ಗೋಪಾಲ ಗೌಡ 50 ಸಾವಿರ ರೂ. ಸಾಲ ಮಾಡಿ ಮಕ್ಕಳಿಗೆ ಎರಡು ಮೊಬೈಲ್ ಕೊಡಿಸಿದ್ದರು.ಈ ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ಇನ್‌ಫೋಸಿಸ್ ಸಂಸ್ಥೆ ಲ್ಯಾಪ್‌ಟಾಪ್ ನೀಡಿದೆ.

 

Scroll to Top