ಗೂಗಲ್ ಪ್ಲೇ ಸ್ಟೋರ್‌ಗೆ ಮತ್ತೇ ಮರಳಿದ ಪೇಟಿಎಂ

(ನ್ಯೂಸ್ ಕಡಬ) newskadaba.com , ಸೆ.19:  ಪೇಟಿಎಂ ಬಳಕೆದಾರರಿಗೆ ಇಲ್ಲಿದೆ ಗುಡ್‌ ನ್ಯೂಸ್. ಪ್ಲೇ ಸ್ಟೋರ್‌ನಿಂದ ಬ್ಯಾನ್ ಆಗಿ 4 ಗಂಟೆಗಳ ನಂತರ ಪೇಟಿಎಂ ಹಿಂತಿರುಗಿದೆ. ಈ ಕುರಿತು ಪೇಟಿಎಂ ತನ್ನ ಮಾಹಿತಿಯನ್ನು ಟ್ವೀಟ್ ಮೂಲಕ ನೀಡಿದೆ.

 

ಗೂಗಲ್ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪದ ಮೇಲೆ ಪೇಟಿಎಂ ಅನ್ನು ಪ್ಲೇ ಸ್ಟೋರ್‌ನಿಂದ ಹೊರಗಿಡಲಾಗಿತ್ತು. ಆದರೆ ಈಗ ಮತ್ತೆ ಪ್ಲೇ ಸ್ಟೋರ್‌ಗೆ ಮರಳಿದ್ದು, ಈಗ ಬಳಕೆದಾರರು ಅದನ್ನು ಡೌನ್‌ಲೋಡ್ ಮಾಡಬಹುದು. ಶುಕ್ರವಾರ, ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಅನ್ನು ತೆಗೆದುಹಾಕಿದೆ, ಆದರೂ ಇದಕ್ಕೆ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ. ಮಾಹಿತಿಯ ಪ್ರಕಾರ, ನಿಯಮಗಳ ಪುನರಾವರ್ತಿತ ಉಲ್ಲಂಘನೆಯಿಂದಾಗಿ ಗೂಗಲ್ ಪ್ಲೇ ಸ್ಟೋರ್‌ನಿಂದ ಪೇಟಿಎಂ ಅಪ್ಲಿಕೇಶನ್ ಅನ್ನು ತೆಗೆದುಹಾಕಲು ಸರ್ಚ್ ಎಂಜಿನ್ ಕಂಪನಿ ನಿರ್ಧರಿಸಿತ್ತು.

Also Read  ಕಡಬ: ದ್ವಿಚಕ್ರ ವಾಹನಗಳ ಮಾಡಿಫಿಕೇಶನ್ ಸಂಸ್ಥೆ 'ಮೋಟೋ ಗೇರ್' ಶುಭಾರಂಭ ➤‌ ಎಲ್ಇಡಿ ಲೈಟ್ಸ್, ಹೆಲ್ಮೆಟ್ಸ್, ಜಾಕೆಟ್ಸ್, ಬೈಕ್ ಗಳ ಎಲ್ಲಾ ವಿಧದ ಐಟಂಗಳು ಒಂದೇ ಸೂರಿನಡಿ ಲಭ್ಯ

 

 

error: Content is protected !!
Scroll to Top