ಸುಳ್ಯ ತಾಲೂಕಿನ 14 ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸರಕಾರದಿಂದ ಆದೇಶ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 19. ತಾಲೂಕಿನ 12 ತಾಲೂಕು ರಸ್ತೆಗಳನ್ನು ಜಿಲ್ಲಾ ರಸ್ತೆಗಳನ್ನಾಗಿ, 2 ಜಿಲ್ಲಾ ರಸ್ತೆಗಳನ್ನು ರಾಜ್ಯ ರಸ್ತೆಯಾಗಿ ಮೇಲ್ದರ್ಜೆಗೇರಿಸುವಂತೆ ಶಾಸಕರು ಸರಕಾರಕ್ಕೆ ಪ್ರಸ್ತಾಪ ಮಾಡಿದ್ದು, ಇದೀಗ ಆ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಸರಕಾರ ಆದೇಶ ಹೊರಡಿಸಿದೆ.

ದೊಡ್ಡತೋಟ – ಕುಕ್ಕುಜಡ್ಕ-ಪಾಜಪಳ್ಳ ರಸ್ತೆ 15.05 ಕಿ.ಮೀ, ಗುತ್ತಿಗಾರು- ಬಳ್ಳಕ- ಪಂಜ ರಸ್ತೆ 10.20ಕಿ.ಮೀ, ಗುತ್ತಿಗಾರು- ಕಮಿಲ- ಬಳ್ಪ ರಸ್ತೆ 5.40ಕಿ.ಮೀ, ಆಲೆಟ್ಟಿ- ಬಡ್ಡಡ್ಕ- ಕೂರ್ನಡ್ಕ ರಸ್ತೆ 11.90 ಕಿ.ಮೀ, ಕಾಂತಮಂಗಲ – ಅಜ್ಜಾವರ- ಮಂಡೆಕೋಲು- ಕನ್ಯಾನ ರಸ್ತೆ 10 ಕಿ.ಮೀ, ಸೇವಾಜೆ – ಮಡಪ್ಪಾಡಿ- ಕಂದ್ರಪ್ಪಾಡಿ – ಗುತ್ತಿಗಾರು ರಸ್ತೆ 13.30 ಕಿ.ಮೀ, ನಡುಗಲ್ಲು – ಹರಿಹರಪಲ್ಲತಡ್ಕ – ಬಾಳುಗೋಡು 11 ಕಿ.ಮೀ, ದೊಡ್ಡತೋಟ- ಬೊಮ್ಮಾರು – ಮರ್ಕಂಜ ರಸ್ತೆ 12.10 ಕಿ.ಮೀ, ಅಜ್ಜನಗದ್ದೆ – ಕುಕ್ಕುಜಡ್ಕ- ಪೈಲಾರು – ಜಬಳೆ ರಸ್ತೆ 8.10 ಕಿ.ಮೀ, ಅರಂತೋಡು – ತೊಡಿಕಾನ- ದೊಡ್ಡ ಕುಮೇರಿ ರಸ್ತೆ 8 ಕಿ.ಮೀ, ಬೊಬ್ಬೆಕೇರಿ – ಅಯ್ಯನಕಟ್ಟೆ ರಸ್ತೆ 7 ಕಿ.ಮೀ, ಮಲೆಯಾಳ – ಹರಿಹರ ಪಲ್ಲತಡ್ಕ- ಕೊಲ್ಲಮೊಗ್ರ – ಕಲ್ಮಕಾರು 18.15 ಕಿ.ಮೀ ಹೀಗೆ 12 ರಸ್ತೆಗಳನ್ನು ಜಿಲ್ಲಾ ರಸ್ತೆಗಳ ಪಟ್ಟಿಗೆ ಸೇರಿಸಬೇಕೆಂದು ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದರು.

Also Read  ಹೆಂಡತಿಗೆ ಬೈದನೆಂದು ಸ್ನೇಹಿತನನ್ನೇ ಕೊಲೆ ಮಾಡಿದ ಯುವಕ

ಇನ್ನೂ ಸುಳ್ಯ – ಪೈಚಾರು – ಬೆಳ್ಳಾರೆ – ಸವಣೂರು – ಕುದ್ಮಾರು – ಆಲಂಕಾರು – ಸುರುಳಿ, ಮಾದೇರಿ – ಪಟ್ರಮೆ- ಧರ್ಮಸ್ಥಳ ಮುಂಡಾಜೆ ದಿಡುಪೆ ರಸ್ತೆ ಹಾಗೂ ನಿಂತಿಕಲ್ಲು – ಬೆಳ್ಳಾರೆ – ನೆಟ್ಟಾರು – ಅಮ್ಚಿನಡ್ಕ – ಕನ್ನಡ್ಕ – ಕಾವು- ಈಶ್ವರಮಂಗಲ ಪಲ್ಲತ್ತೂರು ರಸ್ತೆಯನ್ನು ರಾಜ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿ ಸರಕಾರ ಆದೇಶ ಹೊರಡಿಸಿದೆ ಎಂದು ಶಾಸಕರು ತಿಳಿಸಿದ್ದಾರೆ. ಇದರ ಜತೆಗೆ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಕಡಬ ತಾಲೂಕಿನ ರಸ್ತೆಯು ಕೂಡಾ ಶಾಸಕರ ಪಟ್ಟಿಯಲ್ಲಿ ಸೇರಿಸಲಾಗಿದೆ.

Also Read  ಡ್ರಗ್ಸ್ ಪ್ರಕರಣ : ಕಿಶೋರ್​ ಸ್ನೇಹಿತೆ ಆಸ್ಕಾ ಅರೇಸ್ಟ್ , ಮತ್ತಷ್ಟು ಮಾಹಿತಿ ಬಹಿರಂಗ.

error: Content is protected !!
Scroll to Top