(ನ್ಯೂಸ್ ಕಡಬ) newskadaba.com ಕಡಬ, ಸೆ.18. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಇನ್ನಿತರ ಮುಖಂಡರ ಫೇಸ್‍ಬುಕ್, ಇನ್ಸ್ಟಾಗ್ರಾಂ ಖಾತೆಯಲ್ಲಿರುವ ಮೂಲ ಡಿಪಿ /ಫೋಟೋವನ್ನು ನಕಲು ಮಾಡಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅದಕ್ಕೆ ಅಳವಡಿಸಿ ಅವರ ಸಂಪರ್ಕದಲ್ಲಿರುವ ಗೆಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ಬಳಿಕ ಮೆಸೆಂಜರ್ ಮುಖೇನ ಭಾವಾನಾತ್ಮಕ ಸಂದೇಶ ಕಳುಹಿಸಿ ಹಣ ವರ್ಗಾಯಿಸುವಂತೆ ಕೋರಿ ಮರಳಿ ನೀಡುವುದಾಗಿ ಭರವಸೆ ನೀಡಿ ವಂಚಿಸುವ ಜಾಲವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದೆ.
ಇಂತಹ ಹಣದ ಬೇಡಿಕೆ ಇಟ್ಟಲ್ಲಿ ಸಾರ್ವಜನಿಕರು ಕೂಡಲೇ ತಮ್ಮ ಬೀಟ್ ಪೊಲೀಸರಿಗೆ, ಠಾಣೆಗೆ, ಅಥವಾ ಪೊಲೀಸು ಉಪನಿರೀಕ್ಷಕರಿಗೆ ಮಾಹಿತಿ ನೀಡುವಂತೆ ಕಡಬ ಠಾಣಾ ಉಪ ನಿರೀಕ್ಷಕ ರುಕ್ಮ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.