ಇನ್ನುಂದೆ ಅಂಬಾರಿ ಜವಾಬ್ದಾರಿ ಅಭಿಮನ್ಯುವಿಗೆ ➤ ಮೆರವಣಿಗೆ ದಿಕ್ಸೂಚಿ ಮಾತ್ರ ಅರ್ಜುನನಿಗೆ

(ನ್ಯೂಸ್ ಕಡಬ) newskadaba.com ಮೈಸೂರು, ಸೆ.18:  ಎಂಟು ವರ್ಷಗಳ ಕಾಲ ಚಿನ್ನದ ಅಂಬಾರಿ ಹೊತ್ತು ಜನರ ಆಕರ್ಷಣೆಯ ಕೇಂದ್ರಬಿಂದುವಾಗಿ ಮಿಂಚಿದ ಅರ್ಜುನ ಇನ್ನು ಮುಂದೆ ಕೇವಲ ಮೆರವಣಿಗೆ ದಿಕ್ಸೂಚಿ ಮಾತ್ರ!

 

 

ಜಂಬೂ ಸವಾರಿ ಮೆರವಣಿಗೆಯಲ್ಲಿ ಅಗ್ರ ಜವಾಬ್ದಾರಿ ನಿರ್ವಹಿಸಿದ್ದ ಅರ್ಜುನ ವಯಸ್ಸಿನ ಕಾರಣಕ್ಕೆ ನಿಶಾನೆ ಆನೆಯಾಗಿ ಕಾರ್ಯ ನಿರ್ವಹಿಸುವ ಮುಖಾಂತರ ನೇಪತ್ಯಕ್ಕೆ ಸರಿಯಲಿದೆ. ಈ ಸಾಲಿನಲ್ಲಿ ಕೊರೊನಾ ಕಾರಣಕ್ಕೆ ಜಂಬೂಸವಾರಿಯನ್ನು ಅರಮನೆಗೆ ಸೀಮಿತಗೊಳಿಸಿ, ಆನೆಗಳ ಸಂಖ್ಯೆಯನ್ನು 12ರಿಂದ 5ಕ್ಕೆ ಇಳಿಸಲಾಗಿದೆ. ಹೀಗಾಗಿ 2012ರಿಂದ ಸತತ 8 ಬಾರಿ ಅಂಬಾರಿ ಹೊತ್ತ ಅರ್ಜುನನಿಗೆ ಈ ಬಾರಿ ಪಾಲ್ಗೊಳ್ಳುವ ಅವಕಾಶವೇ ಸಿಗುತ್ತಿಲ್ಲ.ನ್ಯಾಯಾಲಯದ ಆದೇಶದಂತೆ 60 ವರ್ಷ ಪೂರೈಸಿರುವ ಆನೆಗಳನ್ನು ಭಾರ ಹೊರುವಂತಹ ಕೆಲಸಗಳನ್ನು ಮಾಡಿಸುವಂತಿಲ್ಲ. ಕಳೆದ ಏಪ್ರಿಲ್‌ಗೆ 60 ವರ್ಷ ಪೂರೈಸಿರುವ ಅರ್ಜುನನಿಗೆ ಅಂಬಾರಿ ಹೊರುವ ಕೆಲಸದಿಂದ ಮುಕ್ತಿ ನೀಡಿ ಅಭಿಮನ್ಯುವಿಗೆ ಜವಾಬ್ದಾರಿ ನೀಡಲಾಗಿದೆ. ಆದರೆ ಅರ್ಜುನ ಇಂದಿಗೂ ಬಲಿಷ್ಠವಾಗಿರುವ ಕಾರಣ ಮುಂದಿನ ಐದು ವರ್ಷಗಳವರೆಗೆ ದಸರಾ ಕಾರ್ಯದಲ್ಲಿ ಬಳಕೆ ಮಾಡಿಕೊಳ್ಳಲು ಅರಣ್ಯ ಇಲಾಖೆ ನಿರ್ಧರಿಸಿದೆ.

Also Read  ವಿಷ ಸೇವಿಸಿ ಬಳಿಕ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನ ➤ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಮೃತ್ಯು..!!

error: Content is protected !!
Scroll to Top