ಬಿಳಿನೆಲೆ : ಬಡ ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣಕ್ಕೆ ಸ್ಮಾರ್ಟ್ ಫೋನ್ ನೀಡಿದ ಹಳೆ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಬಿಳಿನೆಲೆ, ಸೆ.14:  ಪ್ರಸ್ತುತ ಶ್ರೀ ಗೋಪಾಲಕೃಷ್ಣ ಪ್ರೌಢ ಬಿಳಿನೆಲೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹೆಚ್ಚಿನ ಪೋಷಕರು ಆರ್ಥಿಕವಾಗಿ ತುಂಬಾ ಹಿಂದುಳಿದವರಾಗಿದ್ದು. . ಕೊರೋನಾ ತೊಂದರೆಯಿಂದಾಗಿ ಮಕ್ಕಳು ಶಾಲೆಗಳಿಗೆ ಬರುವಂತಿಲ್ಲವಾ ದುದರಿಂದ ,ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಹಳೆ ವಿದ್ಯಾರ್ಥಿಗಳು, ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ನೀಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಹ ನೀಡಿದ್ದಾರೆ.

.

ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ ಮಕ್ಕಳಿಗೆ ಕಲಿಕಾ ಚಟುವಟಿಕೆಗಳನ್ನು ಆನ್ಲೈನ್ ಮೂಲಕ ಶಿಕ್ಷಕರು ನಡೆಸುತ್ತಿದ್ದಾರೆ. ಆದರೆ ಸಂಬಂಧಿಸಿದ ಚಟುವಟಿಕೆಗಳನ್ನು ಮಕ್ಕಳು ನೋಡಿ ಕಲಿಯಲು ಅವರಲ್ಲಿ ಮೊಬೈಲ್ ಇಲ್ಲದೆ ಕಲಿಕೆಗೆ ತೊಂದರೆ ಆಗುತ್ತಿದ್ದು ಅಂತಹಾ ಬಡ ಮಕ್ಕಳಿಗೆ ಕನಿಷ್ಠ ಅನುಕೂಲತೆಯುಳ್ಳ 4 ಸ್ಮಾರ್ಟ್ ಫೋನ್ ಅವಶ್ಯಕತೆ ಇದೆ ಎಂದು ಹಳೆ ವಿದ್ಯಾರ್ಥಿಗಳಲ್ಲಿ ಆಡಳಿತ ಮಂಡಳಿ , ಮುಖ್ಯಗುರುಗಳು ಶಿಕ್ಷಕರು ಸಿಬ್ಬಂದಿಗಳು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಗಳಲ್ಲಿ  , SRK  ಲ್ಯಾಂಡರ್ ಪುತ್ತೂರು ಇದರ ಉದ್ಯಮಿಯಾಗಿರುವ 1992 ಬ್ಯಾಚ್ ನಾ ಶ್ರೀ ಕೇಶವ ಎ. ,  .1987 ಬ್ಯಾಚ್ ನಾ ಶ್ರೀ ಸಂತೋಷ್ ರಾವ್ ಬೆಂಗಳೂರು.,  2005ನೇ ಬ್ಯಾಚ್ ಶ್ರೀ ಅಶೋಕ್ ಕುಮಾರ್ ಬೆಂಗಳೂರು . , 1998ನೇ ಬ್ಯಾಚ್ಶ್ರೀ ಪದ್ಮನಾಭ ಎ. ಯು.ಎಸ್.ಎ., ಇವರು ಕೊಡುಗೆಯಾಗಿ ನೀಡಿದ್ದಾರೆ. ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿನ ಬಡ ವಿಧ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ಗಳನ್ನು ಇಂದು ಬೆಳಗ್ಗೆ ಹಸ್ತಾಂತರಿಸಿದ್ದಾರೆ. ಈ ಸಂಬರ್ಭದಲ್ಲಿ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಮುಖ್ಯಗುರುಗಳಾದ ಹಿರಿಯಣ್ಣ ಗೌಡ, ಶಿಕ್ಷಕರಾದ ಶಿರಾಮ್ ಗೌಡ ಏನೆಕಲ್ಲು, ದೀನೆಶ್ ಕುಂದರ್, ಗಣಪತಿ ಭಟ್, ಸತ್ಯಶಂಕರ್ ಭಟ್ ಸೇರಿದಂತೆ ಸತೀಶ್ ಎರ್ಕ ಮಕ್ಕಳಿಗೆ ಮೊಬೈಲ್ ಫೋನ್ ಗಳನ್ನು ವಿದ್ಯಾರ್ಥಿಗಳಿಗೆ ಅತಿಥಿಗಳ ಸಮ್ಮುಖದಲ್ಲಿ ವಿತರಿಸಿದರು.

Also Read  ಕೊನೆಗೂ ಪೊಲೀಸರ ಅತಿಥಿಯಾದ ಪ್ರವೀಣ್ ಹಂತಕರು

 

 

error: Content is protected !!
Scroll to Top