ರಿಯಲ್ ಸ್ಟಾರ್ ಉಪ್ಪಿ ಜೊತೆ ಅಭಿನಯಿಸಲಿರುವ ಬೇಬಿ ಡಾಲ್ ಆದ್ಯಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.19, ಉಡುಪಿಯ ಬೇಬಿ ಡಾಲ್ ಆದ್ಯಾ ಗೆ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಅಭಿನಯ ಮಾಡುವ ಅವಕಾಶ ಒದಗಿಬಂದಿದೆ.

ಬೇಬಿ ಡಾಲ್ ಆದ್ಯಾ ಅವರು ಉಪೇಂದ್ರ ಅವರ`ಹೋಮ್ ಮಿನಿಸ್ಟರ್’ ಸಿನಿಮಾದಲ್ಲಿ  ನಟಿಸಲಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ಝೀ ಕನ್ನಡ ಚಾನೆಲ್ ನಲ್ಲಿ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಆದ್ಯಾಳಿಗೆ ಒಂದರ ಮೇಲೊಂದರಂತೆ ಒಳ್ಳೆಯ ಆಫರ್ ಗಳು ಬರುತ್ತಿವೆ. ಈಗಾಗಲೇ ರಕ್ಷಿತ್ ಶೆಟ್ಟಿ ನಿರ್ಮಾಣದ `ಭೀಮಸೇನಾ ನಳಮಹರಾಜ’ ಚಿತ್ರದಲ್ಲಿ ನಟಿಸುತ್ತಿದ್ದು, ಈಗ ಉಪೇಂದ್ರರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ.

Also Read  ಪಾರ್ಕಿನ್‌ಸನ್ಸ್ ಎಂಬ ನಡುಕದ ಖಾಯಿಲೆ ✍? ಡಾ|| ಮುರಲೀ ಮೋಹನ್ ಚೂಂತಾರು

ಹೋಮ್ ಮಿನಿಸ್ಟರ್ ಯಾವುದೇ ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಸಿನಿಮಾವಲ್ಲ. ಚಿತ್ರದಲ್ಲಿ ಗಂಡನಿಗೆ ಪತ್ನಿಯೇ ಹೋಮ್ ಮಿನಿಸ್ಟರ್ ಆಗಿರುವ ಸುಂದರ ಕಥಾ ಹಂದರವುಳ್ಳ ಸಿನಿಮಾ ಇದಾಗಿದೆ.

ಕಿರುತೆರೆಯಲ್ಲಿ ತನ್ನ ಹಾಡು ಮತ್ತು ಮುದ್ದಾದ ನಗುವಿನ ಮೂಲಕ ಎಲ್ಲರನ್ನೂ ಮೋಡಿ ಮಾಡಿದ್ದ ಆದ್ಯಾ ಹಿರಿತೆರೆಯಲ್ಲಿ ಈಗ ಮೋಡಿ ಮಾಡಲು ಬರುತ್ತಿದ್ದಾಳೆ.

error: Content is protected !!
Scroll to Top