ಸುಳ್ಯ: ತೂಕ, ಅಳತೆ ಸಾಧನಗಳಿಗೆ ಸತ್ಯಾಪನೆ ಮುದ್ರೆ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11. ಕಾನೂನು ಮಾಪನಶಾಸ್ತ್ರ ನಿರೀಕ್ಷಕರು ಪುತ್ತೂರು ಕಚೇರಿಯಿಂದ ತೂಕ, ಅಳತೆ ಮತ್ತು ತೂಕದ ಸಾಧನಗಳ 2020 ನೇ ಸಾಲಿನ ವಾರ್ಷಿಕ ಸತ್ಯಾಪನೆ ಮುದ್ರೆ ಶಿಬಿರವು ಸುಳ್ಯ ಗಾಂಧಿನಗರದ ಸರ್ಕಾರಿ ಪ್ರೌಢಶಾಲೆ ಮೈದಾನದ ಎದರುಗಡೆ ಇರುವ ಎಸ್.ಜಿ ಸ್ಟೋರ್ ಬಿಲ್ಡಿಂಗ್‍ನ ಮೊದಲನೇ ಮಹಡಿಯಲ್ಲಿ ಪ್ರಾರಂಭವಾಗಿದೆ.


ಸುಳ್ಯ ಶಿಬಿರ ವ್ಯಾಪ್ತಿಯಲ್ಲಿ ಜಾಲ್ಸೂರು, ಸುಳ್ಯ, ಅಜ್ಜವರ, ಕಲ್ಲುಗುಂಡಿ, ಕುಕ್ಕುಜಡ್ಕ, ದೊಡ್ಡತೋಟ, ಎಲಿಮಲೆ, ಮಂಡೆಕೋಲು, ಸಂಪಾಜೆ, ಉಬರಡ್ಕ, ಉಬರಡ್ಕ ಮಿತ್ತೂರು, ಕನಕಮಜಲು, ಮರ್ಕಂಜ, ತೋಡಿಕಾನ, ಅರಂತೋಡು, ಕೊಡಿಯಾಲ, ಆಲೆಟ್ಟಿ ವ್ಯಾಪ್ತಿಯ ವ್ಯಾಪಾರಸ್ಥರು ಮತ್ತು ತೂಕ ಮತ್ತು ಅಳತೆ ಸಾಧನಗಳ ಬಳಕೆದಾರರು ತಾವು ಬಳಸುವ ತೂಕ, ಅಳತೆ ಮತ್ತು ತೂಕದ ಸಾಧನಗಳನ್ನು ಶಿಬಿರ ಕಚೇರಿಗೆ ಪ್ರತಿ ಬುಧವಾರ ಹಾಜರುಪಡಿಸಿ ಸತ್ಯಾಪನೆ ಮುದ್ರೆ ಮಾಡಿಸಬೇಕು. ಶಿಬಿರವು ನವೆಂಬರ್ 7 ರಂದು ಮುಕ್ತಾಯಗೊಳ್ಳುತ್ತದೆ ಎಂದು ಪುತ್ತೂರು ಉಪವಿಭಾಗದ ಕಾನೂನು ಮಾಪನಶಾಸ್ತ್ರದ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.

Also Read  "mostbet'teki Belge Numarasının Gizemini Çözmek: Bilmeniz Gereken Her Şe

error: Content is protected !!
Scroll to Top