ಕಡಬ: ‘ಬ್ರ್ಯಾಂಡ್ ಕಾರ್ ಡೆಕೊರ್’ ಶುಭಾರಂಭ ➤ ಬೈಕ್‌ – ಕಾರುಗಳ ವಿವಿಧ ವಿನ್ಯಾಸದ ಬಿಡಿಭಾಗಗಳ ಮಳಿಗೆ

(ನ್ಯೂಸ್ ಕಡಬ) newskadaba.com ಕಡಬ, ಸೆ.11. ವಾಹನದ ವಿನ್ಯಾಸಗಳನ್ನು ವಿವಿಧ ಉಪಕರಣಗಳನ್ನು ಜೋಡಿಸಿ ತಮ್ಮಿಷ್ಟದಂತೆ ಬದಲಾಯಿಸುವ ವಾಹನ ಪ್ರಿಯರಿಗೆ ಸಂತಸದ ಸುದ್ದಿಯೊಂದಿದ್ದು, ಕಾರು ಹಾಗೂ ಬೈಕ್ ಗಳ ವಿವಿಧ ಬಗೆಯ ಬಿಡಿಭಾಗಗಳ ಮಳಿಗೆ ‘ಬ್ರ್ಯಾಂಡ್ ಕಾರ್ ಡೆಕರ್’ ಗುರುವಾರದಂದು ಕಡಬದಲ್ಲಿ ಶುಭಾರಂಭಗೊಂಡಿತು.

ಕಡಬದ ಸೈಂಟ್ ಜೋಕಿಮ್ಸ್ ಚರ್ಚ್ ಮುಂಭಾಗದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡ ಮಳಿಗೆಯನ್ನು ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ರುಕ್ಮ ನಾಯ್ಕ್ ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಸೀತಾರಾಮ ಗೌಡ ಪೊಸವಳಿಕೆ, ಸಯ್ಯದ್ ಮೀರಾ ಸಾಹೇಬ್, ಸತೀಶ್ ನಾಯ್ಕ್ ಮೇಲಿನ ಮನೆ, ಬಾಬು ಮುಗೇರ, ಶಿವರಾಮ್ ಎಂ.ಎಸ್. ಮೊದಲಾದವರು ಭಾಗವಹಿಸಿದ್ದರು.

Also Read  ಪೆಟ್ರೋಲ್, ಗ್ಯಾಸ್ ಜೊತೆಗೆ ದುಬಾರಿಯಾದ ಅಡುಗೆ ಎಣ್ಣೆ ➤ ಜನಸಾಮಾನ್ಯರಿಗೆ ಗಾಯದ ಮೇಲೆ ಮತ್ತೆ ಬರೆ‌

ನೂತನ ಮಳಿಗೆಯಲ್ಲಿ ಮ್ಯೂಸಿಕ್ ಸಿಸ್ಟಮ್, ಸಬ್ ವೂಫರ್ ಸಿಸ್ಟಮ್, ಸೀಟ್ ಕವರ್ ಗಳು, ಫ್ಲೋರ್ ಮ್ಯಾಟಿಂಗ್, ರಿವರ್ಸ್ ಕ್ಯಾಮೆರಾ, ಸೆನ್ಸರ್, ಮ್ಯಾಗ್ ವೀಲ್ ಮತ್ತು ವೀಲ್ ಕ್ಯಾಪ್ ಗಳು, ಸೆಂಟರ್ ಲಾಕಿಂಗ್ ಸಿಸ್ಟಮ್, ಪವರ್ ವಿಂಡೋ ಸಿಸ್ಟಮ್, ಪ್ರಾಜೆಕ್ಟರ್ ಹೆಡ್ ಲೈಟ್ಸ್, ಹೆಚ್ಐಡಿ ಲೈಟ್ ಮೊದಲಾದ ಬಿಡಿಭಾಗಗಳನ್ನು ನುರಿತ ಟೆಕ್ನೀಶಿಯನ್ ಮೂಲಕ ಫಿಟ್ ಮಾಡಿ ಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 8277 259 716 ಅಥವಾ 9731 772 562 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

error: Content is protected !!
Scroll to Top