ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ

(ನ್ಯೂಸ್ ಕಡಬ) newskadaba.com ನವದೆಹಲಿ. ಆ,31:  ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶ. ಕೊರೊನಾ ಸೋಂಕಿಗೀಡಾಗಿದ್ದ ಪ್ರಣಬ್ ಮುಖರ್ಜಿ ನಿಧನ. ಶ್ವಾಸಕೋಶದ ಸೋಂಕಿನಿಂದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ  ಇದೀಗಾ ಕೊನೆಯುಸಿರೆಳೆದಿದ್ದಾರೆ.  ಪುತ್ರ ಅಭಿಜಿತ್ ಟ್ವೀಟ್ ತಿಳಿಸಿದ್ದಾರೆ.  ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ.

 

 

ಅವರ ಸ್ಥಿತಿ ದಿನ ಕಳೆದಂತೆ ಹದಗೆಡುತ್ತಿದೆ ಎಂದು ಸೇನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದರು . 84 ವರ್ಷದ ಪ್ರಣಬ್ ಮುಖರ್ಜಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಇತ್ತೀಚೆಗೆ ಸೇನಾ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್ ಮಾಡಲಾಗಿತ್ತು. ಪ್ರಣಬ್ ಮುಖರ್ಜಿ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದರು.  ಆದರೆ ಇದೀಗಾ ಇಹಲೋಕ ತ್ಯಜಿಸಿದ್ದಾರೆ.

Also Read  'ರಾಜ್ಯ ಸರಕಾರ ದ.ಕ. ಜಿಲ್ಲೆಗೆ 300 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು'          ವೇದವ್ಯಾಸ ಕಾಮತ್             

error: Content is protected !!
Scroll to Top