ಎಸ್ಡಿಪಿಐ ಪೆರಿಯಡ್ಕ ಬ್ರಾಂಚ್ ವತಿಯಿಂದ ಆಯುಷ್ಮಾನ್ ಭಾರತ್ ಕಾರ್ಡ್ ಅಭಿಯಾನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 31. ಎಸ್ಡಿಪಿಐ ಉಪ್ಪಿನಂಗಡಿ ವಲಯದ ಪೆರಿಯಡ್ಕ ಬ್ರಾಂಚ್ ಮಟ್ಟದಲ್ಲಿ ಭಾರತ ಸರ್ಕಾರದ ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಪ್ಪಿನಂಗಡಿ ನಿಕಟಪೂರ್ವ ಅಧ್ಯಕ್ಷರಾದ ಅಬ್ದುಲ್ ರಝಾಕ್ ಸೀಮಾ ಮಾತನಾಡಿ, ಎಸ್‌ಡಿಪಿಐ ಪಕ್ಷವು ಕಳೆದ ಹತ್ತು ವರ್ಷಗಳಿಂದ ಅನ್ಯಾಯದ ವಿರುದ್ಧದ ನ್ಯಾಯಯುತ ಹೋರಾಟ ಮತ್ತು ಸಮಾಜಮುಖಿ ಕೆಲಸಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದು, ಇದೀಗ ರಾಜ್ಯಾದ್ಯಂತ ಸರಕಾರಿ ಸವಲತ್ತುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಗ್ರಾಮೀಣ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಎಸ್‌ಡಿಪಿಐ ಪಕ್ಷವು ಜನರ ಹಿತವನ್ನು ಬಯಸುತ್ತಿದ್ದು, ಇಂತಹ ಹಲವಾರು ಜನೋಪಯೋಗಿ ಕಾರ್ಯಗಳಿಂದಲೇ ಜನಸಾಮಾನ್ಯರಿಗೆ ಪಕ್ಷದ ಮೇಲಿನ ಜನರ ಒಳವು ಕೂಡಾ ಹೆಚ್ಚಾಗ ತೊಡಗಿದೆ ಎಂದು ಹೇಳಿದರು.

Also Read  ಬ್ರಹ್ಮಾವರ :ಸೊಸೈಟಿ ಬ್ಯಾಂಕ್‌ ಉದ್ಯೋಗಿ ಆತ್ಮಹತ್ಯೆಗೆ ಶರಣು


ಮಾತ್ರವಲ್ಲದೇ ಆಯುಷ್ಮಾನ್ ಭಾರತ್ ಕಾರ್ಡ್ ಇದರ ಪರಿಣಾಮಕಾರಿಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಎಲ್ಲಾ ವರ್ಗದ ಇನ್ನೂರಕ್ಕಿಂತಲೂ ಹೆಚ್ಚು ಫಲಾನುಭವಿಗಳು ಆಯುಷ್ಮಾನ್ ಕಾರ್ಡ್ ಮಾಡಿಸುವ ಮೂಲಕ ಸರಕಾರಿ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡರು.

ವೇದಿಕೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ವಲಯಾಧ್ಯಕ್ಷರು ಅಬ್ದುಲ್ ರಶೀದ್ ಮಠ, ಪೆರಿಯಡ್ಕ ಜುಮಾ ಮಸ್ಜಿದ್ ಅಧ್ಯಕ್ಷರಾದ ಕೆ.ಪಿ ಅಬ್ದುಲ್ ಬಶೀರ್ ನಿರ್ಮ ಮತ್ತು ಪ್ರಧಾನ ಕಾರ್ಯದರ್ಶಿ ಬಿಎಂ ಅಬ್ದುಲ್ ಬಶೀರ್, ಮುಸ್ತಫಾ ಲತೀಫಿ ಎಸ್‌ಡಿಪಿಐ ಉಪ್ಪಿನಂಗಡಿ ವಲಯಾಧ್ಯಕ್ಷರು, ಎಸ್‌ಡಿಪಿಐ ಪುತ್ತೂರು ತಾಲೂಕು ವಿಧಾನ ಸಭಾ ಸಮಿತಿ ಕೋಶಾಧಿಕಾರಿ ಇಕ್ಬಾಲ್ ಕೆಂಪಿ ಹೀಗೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಪೆರಿಯಡ್ಕ ಬ್ರಾಂಚ್ ಅಧ್ಯಕ್ಷರಾದ ನವಾಝ್ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು, ಸ್ಥಳೀಯ ಉದ್ಯಮಿ ಅಬ್ದುಲ್ ರಹಿಮಾನ್ ಬಿಕೆ ವಂದಿಸಿದರು.

Also Read  ಅ. 16 ರಂದು ಕಾವೇರಿ ಯೋಜನೆಯ 5ನೇ ಹಂತಕ್ಕೆ ಚಾಲನೆ

error: Content is protected !!
Scroll to Top