ಮಂಗಳೂರು: ಮೊಬೈಲ್ ಅಂಗಡಿಯ ಗೋಡೆ ಕುಸಿದು ಓರ್ವನಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29. ಮೊಬೈಲ್‌ ಅಂಗಡಿಯೊಂದರ ಗೋಡೆ ಕುಸಿದು ಬಿದ್ದ ಪರಿಣಾಮ ಓರ್ವ ಗಾಯಗೊಂಡ ಘಟನೆ ನೆಲ್ಲಿಕಾಯಿ ರಸ್ತೆಯ ರಾವ್‌ ಸರ್ಕಲ್‌‌‌ ಬಳಿಯಲ್ಲಿ ಶನಿವಾರದಂದು ನಡೆದಿದೆ.

ಗಾಯಗೊಂಡವರನ್ನು ಸಂಶುದ್ದೀನ್‌ (26) ಎಂದು ಗುರುತಿಸಲಾಗಿದೆ. ಇವರು ಮೊಬೈಲ್‌ ಅಂಗಡಿಯನ್ನು ವಿಶಾಲಗೊಳಿಸುವ ಸಲುವಾಗಿ ಕೆಲಸ ಮಾಡುತ್ತಿದ್ದ ವೇಳೆ ಶೀಟ್‌ ಸಮೇತ ಗೋಡೆ ಕೂಡಾ ಕುಸಿದು ಬಿದ್ದಿದೆ. ಪರಿಣಾಮ ಸಂಶುದ್ದೀನ್‌‌‌‌ ಅವರಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.

Scroll to Top