ಹಾಡಹಗಲೆ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 29.  ರಸ್ತೆ ಬದಿಯಲ್ಲಿ ಆಡು ಮೇಯಿಸಲೆಂದು ತೆರಳುತ್ತಿದ್ದ ಯುವತಿಯ ಮೇಲೆ ಕೈ ಹಾಕಿ ಎಳೆದುಕೊಂಡು ಹೋಗಲೆತ್ನಿಸಿದ ಘಟನೆ ಮಲೆಬೆಟ್ಟುವಿನಲ್ಲಿ ಹಾಡಹಗಲೇ ನಡೆದಿದೆ.

ಮಲೆ ಬೆಟ್ಟುವಿನಲ್ಲಿ ಕಲ್ಲಿನ ಕೆಲಸ ಮಾಡುವ ಸಾದಿಕ್ ಎಂಬಾತ ನಿನ್ನಿಕಲ್ಲು ಪರಿಸರದ ಯುವತಿಯು ಆಡು ಮೇಯಿಸುತ್ತಿದ್ದ ವೇಳೆ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ.  ಅಪಾಯ ಅರಿತ ಯುವತಿಯು ಜೋರಾಗಿ ಕಿರುಚಿದ ಬೊಬ್ಬೆ ಕೇಳಿ ಆಕೆಯ ಅಣ್ಣ ಸ್ಥಳಕ್ಕೆ ಧಾವಿಸಿ, ಸಾದಿಕ್ ನನ್ನು ಹಿಡಿದುಕೊಂಡು ಬಲವಾಗಿ ಥಳಿಸಿದ್ದಾರೆ.‌‌ ನಂತರ ರಾಷ್ಟ್ರೀಯ ಹಿಂದೂ ಜಾಗರಣ‌ ವೇದಿಕೆಯ ಕಾರ್ಯಕರ್ತರಿಗೆ ಕರೆ ಮಾಡಿದ್ದು, ಅವರು ತಮ್ಮ‌ ಕಾರಿನಲ್ಲಿ ಆರೋಪಿಯನ್ನು ಕರೆದೊಯ್ದು, ಪೊಲೀಸರ ವಶಕ್ಕೆ ಒಪ್ಪಿ‌ಸಲಾಗಿದೆ.

Scroll to Top