ಭಾರತ – ಆಸ್ಟ್ರೇಲಿಯಾ ಏಕದಿನ ಸರಣಿ ► ಭಾರತಕ್ಕೆ 26 ರನ್‌ಗಳ ಜಯ

(ನ್ಯೂಸ್ ಕಡಬ) newskadaba.com ಚೆನ್ನೈ, ‌ಸೆ.18. ಇಲ್ಲಿನ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಐದು ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ 26 ರನ್ ಜಯಗಳಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 50 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 281 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಶ್ ಪಾಂಡೆ ಶೂನ್ಯಕ್ಕೆ ಔಟಾದರೆ, ಅಜಿಂಕ್ಯ ರಹಾನೆ ಕೇವಲ 5 ರನ್ ಗಳಿಸಿದರು. ಧೋನಿ (79) ಹಾಗೂ ಹಾರ್ದಿಕ್ ಪಾಂಡ್ಯ (83) ಸೇರಿ 6ನೇ ವಿಕೆಟ್ ಗೆ 118 ರನ್ ಜೊತೆಯಾಟವಾಡಿದರು.

Also Read  ರಾಜ್ಯದ ರೈತರಿಗೆ ಗುಡ್ ನ್ಯೂಸ್   ➤ ಇನ್ಮುಂದೆ 7 ಗಂಟೆ ನಿರಂತರ 'ವಿದ್ಯುತ್' ಸರಬರಾಜು

ಮಳೆ ಅಡ್ಡಿಪಡಿಸಿದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಆಸ್ಟ್ರೇಲಿಯಾ ತಂಡಕ್ಕೆ 21 ಓವರುಗಳಲ್ಲಿ 164 ರನ್ ಟಾರ್ಗೆಟ್ ನೀಡಲಾಗಿತ್ತು. ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 21 ಓವರ್ಗಳಲ್ಲಿ 137 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಭಾರತದ ಪರ ಯಜುವೇಂಧ್ರ ಚಹಲ್ 3, ಹಾರ್ದಿಕ್ ಪಾಂಡ್ಯ 2, ಕುಲದೀಪ್ ಯಾದವ್ 2 ವಿಕೆಟ್ ಪಡೆದರು. 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

error: Content is protected !!
Scroll to Top