ಎಸ್ಕೆಎಸ್ಸೆಎಸ್ಸೆಫ್ ಗೂನಡ್ಕ ಶಾಖೆ ವತಿಯಿಂದ ಇತ್ತೀಚೆಗೆ ಮರಣ ಹೊಂದಿದ ಕನಕಮಜಲು ಉಸ್ತಾದ್ ರವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ

(ನ್ಯೂಸ್ ಕಡಬ) newskadaba.com ಅರಂತೋಡು, ಆ.28. ಎಸ್ಕೆಎಸ್ಸೆಸ್ಸೆಫ್ ಗೂನಡ್ಕ ಶಾಖಾ ವತಿಯಿಂದ ಇತ್ತೀಚೆಗೆ ಮರಣ ಹೊಂದಿದ ಹಿರಿಯ ವಿದ್ವಾಂಸ ಕನಕಮಜಲು ಉಸ್ತಾದ್ ಎಂದೇ ಖ್ಯಾತಿ ಪಡೆದ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಮತ್ತು ಪೇರಡ್ಕ ಮಸೀದಿಯಲ್ಲಿ ಸೇವೆಗೈದು ಮರಣ ಹೊಂದಿದ ಬಹು| ಅಶ್ರಫ್ ಫೈಝಿ ಕಂಬಿಬಾಣೆ ಉಸ್ತಾದರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ಪೇರಡ್ಕ ಮಸೀದಿಯಲ್ಲಿ ನಡೆಯಿತು.


ಈ ಕಾರ್ಯಕ್ರಮದಲ್ಲಿ ಎಮ್.ಜೆ.ಎಮ್ ಖತೀಬರಾದ ಸುಹೇಲ್ ದಾರಿಮಿಯವರು ನೇತೃತ್ವ ವಹಿಸಿದ್ದರು. ಟಿ.ಎಮ್.ಶಹೀದ್, ಸದರ್ ಉಸ್ತಾದ್ ಝಖರಿಯಾ ದಾರಿಮಿ ಆರ್ಕಾನ, ಮುನೀರ್ ದಾರಿಮಿ, ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟಂಗಾರ್, ಎಮ್.ಜೆ.ಎಮ್ ಕಾರ್ಯದರ್ಶಿ ಇಬ್ರಾಹಿಂ ಶೇಟ್ಟಿಯಡ್ಕ, ಎಮ್.ಆರ್.ಡಿ.ಎ. ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ, ಕೆ.ಎಮ್.ಮೂಸಾನ್ ಅರಂತೋಡು, ಎಸ್ ಕೆ ಎಸ್ ಎಸ್ ಎಫ್ ಶಾಖೆ ಅಧ್ಯಕ್ಷ ತಾಜುದ್ದೀನ್ ಅರಂತೋಡು, ಆಶೀಕ್ ಕುಕ್ಕುಂಬಳ ಮುಂತಾದವರು ಉಪಸ್ಥಿತರಿದ್ದರು. ಮುನೀರ್ ದಾರಿಮಿ ಸ್ವಾಗತಿಸಿ ಸದರ್ ಮುಅಲ್ಲಿಂ ಝಖರಿಯಾ ದಾರಿಮಿ ವಂದಿಸಿದರು.

Also Read  ಕಡಬ ಠಾಣೆಯ ಸ್ವಾಧೀನದಲ್ಲಿರುವ ವಿವಿಧ ವಾಹನಗಳ ಮಾಲಕರಿಗೆ ಸೂಚನೆ ► ವಾರದೊಳಗೆ ವಾಹನಗಳನ್ನು ಬಿಡಿಸದಿದ್ದಲ್ಲಿ ಬಹಿರಂಗ ಹರಾಜಿಗೆ ಚಾಲನೆ

error: Content is protected !!
Scroll to Top