ಸುಳ್ಯ ವಿದ್ಯುತ್ ಲೈನ್‍ಗಳ ಪರಿಶೀಲನೆಗೆ ಸಭೆಯಲ್ಲಿ ಸೂಚನೆ

(ನ್ಯೂಸ್‌ಕಡಬ) newskadaba.com ಸುಳ್ಯ ,ಆ18: ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಮಾಸಿಕ ಪ್ರಗತಿ ಪರಶೀಲನಾ ಸಭೆಯಲ್ಲಿ ತಾಲೂಕು ಪಂಚಾಯತ್ ನ ಅಧ್ಯಕ್ಷರಾದ ಚನಿಯ ಕಲ್ತಡ್ಕ ರವರು ಅಧ್ಯಕ್ಷತೆ ಸ್ಥಾನವನ್ನು ವಹಿಸಿ ಮಾತನಾಡುತ್ತಾ ನಿಂತಿಕಲ್ಲಿನಲ್ಲಿ ವಿದ್ಯುತ್ ತಂತಿ ರಸ್ತೆಗೆ ಬಾಗಿದ ಪರಿಣಾಮ, ಓರ್ವ ಬೈಕ್ ಸವಾರ ಸ್ಥಳದಲ್ಲೆ ಸಜೀವ ದಹನನಾಗಿದ್ದಾರೆ. ಈ ಘಟನೆ ನಡೆದ ಸಂದರ್ಭದಲ್ಲೇ ಸುಮಾರು ವಾಹನಗಳು ಅದೇ ರಸ್ತೆಯಲ್ಲೆ ಚಲಿಸುತ್ತಿತ್ತು. ನಿಂತಿಕಲ್ಲಿನಲ್ಲಿ ನಡೆದ ಘಟನೆಗಳು ತಾಲೂಕಿನ ಯಾವ ಕಡೆಯು ನಡೆಯಬಾರದು.ಈ ಕಾರಣದಿಂದ ಎಲ್ಲಾ ಎಚ್‍ಟಿ ವಿದ್ಯುತ್ ತಂತಿಗಳ ಪರಿಶೀಲನೆ ಅಗತ್ಯ ಇದೆ ಕೂಡಲೇ ಪರಿಶೀಲನೆ ನಡೆಸಬೇಕೆಂದು ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಜಾಹ್ನವಿ ಕಾಂಚೋಡು ರವರು ಸಭೆಯಲ್ಲಿ ತಿಳಿಸಿದರು.

Also Read  ಸೌಜನ್ಯ ಹತ್ಯೆ ಪ್ರಕರಣದ ಮರು ತನಿಖೆಗೆ ಮೇಲ್ಮನವಿ ಹೋಗಬೇಕು..! - ಸಿಎಂ ಸಿದ್ದರಾಮಯ್ಯ

ಇನ್ನು, ಮಳೆಗಾಲ ಕಳೆದ ತಕ್ಷಣ ಕಾಮಗಾರಿಗಳು ಆರಂಭವಾಗಲಿದೆ. ಸೌಭಾಗ್ಯ ಯೋಜನೆಯಡಿ ಆಲೆಟ್ಟಿ ಗ್ರಾಮದ ಮಾಣಿಮರ್ದ್ ಎಂಬಲ್ಲಿ 20 ಕುಟುಂಬಗಳಿಗೆ ಸೋಲಾರ್ ಅಳವಡಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮೆಸ್ಕಾಂ ಜೆ.ಇ ಯವರು ತಿಳಿಸಿದ್ದಾರೆ.

 

 

 

error: Content is protected !!
Scroll to Top