ಕಡಬ, ಪುತ್ತೂರು ಉಭಯ ತಾಲೂಕುಗಳಲ್ಲಿ 20 ಮಂದಿಯಲ್ಲಿ ಕೊರೋನಾ

(ನ್ಯೂಸ್ ಕಡಬ) newskadaba.com ಕಡಬ, ಆ. 18 ,  ಕಡಬ ಹಾಗೂ ಪುತ್ತೂರು ಉಭಯ ತಾಲೂಕುಗಳಲ್ಲಿ ತಾಲೂಕು ಆರೋಗ್ಯ ಇಲಾಖಾ ವರದಿಯಂತೆ ಇಂದು 20 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ.

 

ಬೊಳುವಾರಿನ 40 ವರ್ಷದ ವ್ಯಕ್ತಿ, ಕೋರ್ಟ್ ರಸ್ತೆಯ 51 ವರ್ಷದ ವ್ಯಕ್ತಿ, 30 ವರ್ಷದ ಯುವಕ, 1 ವರ್ಷದ ಮಗು, ಮೊಟ್ಟತ್ತಡ್ಕದ  38 ವರ್ಷದ ವ್ಯಕ್ತಿ, ಬನ್ನೂರಿನ 37 ವರ್ಷದ ಮಹಿಳೆ, ಕೆಮ್ಮಾಯಿಯ 31 ವರ್ಷದ ವ್ಯಕ್ತಿ, ನೆಹರೂನಗರದ 59 ವರ್ಷದ ಮಹಿಳೆ, ಕೂರ್ನಡ್ಕದ 17 ಮತ್ತು 12 ವರ್ಷದ ಬಾಲಕರಿಬ್ಬರು, ಕಬಕ ಗ್ರಾಮದ 45 ವರ್ಷದ ವ್ಯಕ್ತಿ, 60 ವರ್ಷದ ವ್ಯಕ್ತಿ, 65 ವರ್ಷದ ವ್ಯಕ್ತಿ, 34ನೇ ನೆಕ್ಕಿಲಾಡಿ ನಿವಾಸಿ 65 ವರ್ಷದ ವ್ಯಕ್ತಿ, ಬೆಟ್ಟಂಪಾಡಿ ನಿವಾಸಿ65 ವರ್ಷದ ವ್ಯಕ್ತಿ, ಈಶ್ವರಮಂಗಲ ನಿವಾಸಿ 49 ವರ್ಷದ ವ್ಯಕ್ತಿ, ಪಾಣಾಜೆಯ 60 ವರ್ಷದ ಮಹಿಳೆ, ಉಪ್ಪಿನಂಗಡಿಯ 68 ವರ್ಷದ ಮಹಿಒಳೆ, ಕೆಯ್ಯೂರಿನ 29 ವರ್ಷದ ಯುವಕನಲ್ಲಿ ಕೊರೋನಾ ದೃಢಪಟ್ಟಿದೆ. ಕಡಬ ತಾಲೂಕಿನ ಕೋಲ್ಪೆ ನಿವಾಸಿ 17 ವರ್ಷದ ಯುವಕನಲ್ಲೂ ಕೊರೊನಾ ಪಾಸಿಟಿವ್ ಬಂದಿದೆ.

Scroll to Top