ನಕಲಿ ಜಾತಿ ಪ್ರಮಾಣ ಪತ್ರ ಆರೋಪ ಸಾಬೀತು ► ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯಗೆ ಸಂಕಷ್ಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.15. ರಾಜ್ಯ ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯಗೆ ನಕಲಿ ಪ್ರಮಾಣ ಪತ್ರ ನೀಡಿ ಐಪಿಎಸ್​ ಹುದ್ಧೆ ಪಡೆದಿರುವ ಹಿನ್ನೆಲೆಯಲ್ಲಿ ಸಿಬಿಐ ಸಂಕಷ್ಟ ಎದುರಾಗಿದೆ. ಕೆಂಪಯ್ಯ ವಿರುದ್ಧ ಎಸಿಬಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರದಾರರೊಬ್ಬರು ಕೆಂಪಯ್ಯ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಒತ್ತಾಯ ಮಾಡಿ ಹೈಕೋರ್ಟ್​​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆ.

 

ನಕಲಿ ಪ್ರಮಾಣ ಪತ್ರ ಆರೋಪಕ್ಕೆ ಸಂಬಂಧಪಟ್ಟಂತೆ 1990 ರಲ್ಲಿ ಪೊಲೀಸ್​ ಇಲಾಖೆಯು ತನಿಖೆ ನಡೆಸಿ ಕೆಂಪಯ್ಯ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಐಪಿಎಸ್​​ ಹುದ್ಧೆ ಪಡೆದಿದ್ದಾರೆ ಎಂದು ಸಾಬೀತು ಮಾಡಿತ್ತು. ಇಲಾಖೆ ವರದಿ ಆಧಾರಿಸಿ  ಅಜಯ್​ ಕುಮಾರ್​ ಸಿಂಗ್​ ಕ್ರಮ ಕೈಗೊಳ್ಳುವ ಮುನ್ನ ಕೆಂಪಯ್ಯ ಸ್ವಯಂ ನಿವೃತ್ತಿ ಪಡೆದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಆದರೆ ಇದೀಗ ಪ್ರಕರಣ ಹೈಕೋರ್ಟ್​ ಮೆಟ್ಟಿಲೇರಿದ್ದು ಇದೀಗ ಕೆಂಪಯ್ಯರನ್ನ ಸಿಬಿಐ ಭೂತ ಕಾಡಲಾರಂಭಿಸಿದೆ.

 

Scroll to Top