(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.11, ಕೋವಿಡ್ -19 ಸೋಂಕಿನಿಂದ ಮೃತಪಟ್ಟ ಕಡಬ ತಾಲೂಕಿನ ಕೋಡಿಂಬಾಳದ ವ್ಯಕ್ತಿಯೋರ್ವರ ಮೃತದೇಹದ ದಫನ ಕಾರ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಸರಕಾರದ ನಿಯಮಾವಳಿ ಮತ್ತು ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಅಂತ್ಯ ಸಂಸ್ಕಾರವನ್ನು ನೆರವೇರಿಸಿದರು.
ನಿಸಾರ್ ಕುದ್ರಡ್ಕ ನೇತೃತ್ವದಲ್ಲಿ ಪಾಪ್ಯುಲರ್ ಫ್ರಂಟ್ ತಂಡದ ಸಹಕಾರದಿಂದ ಮಯ್ಯತ್ ಪರಿಪಾಲನೆಯ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಅಂತ್ಯಕ್ರಿಯೆಯ ಸಂಪೂರ್ಣ ಉಸ್ತುವಾರಿಯನ್ನು ಸಾದಿಕ್ ಅತ್ತಾಜೆ ವಹಿಸಿಕೊಂಡಿದ್ದರು. ಕೋಡಿಂಬಾಳ ಜಮಾಅತ್ ಆಡಳಿತ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯದರ್ಶಿಯವರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದರು.