(ನ್ಯೂಸ್ ಕಡಬ) newskadaba.com ಸುಳ್ಯ. ಆ. 9, ಎಸ್ಕೆಎಸ್ಸೆಸ್ಸೆಫ್ ತುರ್ತು ಸೇವಾ ವಿಭಾಗ ವಿಖಾಯದ ತರಬೇತಿ ಹೊಂದಿದ ತಂಡವು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರನ್ನು ಮಡಿಕೇರಿಯಲ್ಲಿ ಭೇಟಿಯಾಗಿ ವಿಖಾಯದ ಕಾರ್ಯವೈಖರಿಯ ಬಗ್ಗೆ ವಿವರಿಸಿದರು.
ವಿಖಾಯ ಸ್ವಯಂ ಸೇವಕರ ಸೇವೆಯ ಕುರಿತು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ. ಶಾಹಿದ್ ಡಿ.ಕೆ ಶಿವಕುಮಾರ್ ರವರಿಗೆ ವಿವರವಾಗಿ ತಿಳಿಸಿದರು. ಕಳೆದ ವರ್ಷ ಜೋಡುಪಾಲ ದುರಂತದ ಸಂದರ್ಭದಲ್ಲಿ ಯಾವುದೇ ರೀತಿಯ ಸುರಕ್ಷಾ ಸಾಮಾಗ್ರಿಗಳು ಇಲ್ಲದೇ ಹಲವಾರು ಜನರನ್ನು ರಕ್ಷಿಸಿದ ಸುಳ್ಯ ವಿಖಾಯ ತಂಡವನ್ನು ಡಿ.ಕೆ.ಶಿ ಪ್ರಶಂಸಿದರು.
ಭೇಟಿಯ ಸಂದರ್ಭದಲ್ಲಿ ಸುಳ್ಯ ವಿಖಾಯ ಚೇರ್ಮೆನ್ ಷರೀಫ್ ಅಜ್ಜಾವರ, ಜ.ಕನ್ವೀನರ್ ಖಲಂದರ್ ಎಲಿಮಲೆ, ಕಾರ್ಯದರ್ಶಿ ತಾಜುದ್ದೀನ್ ಟರ್ಲಿ, ವಿಖಾಯ ಆಕ್ಟೀವ್ ವಿಂಗ್ ಸದಸ್ಯ ಆಶಿಕ್ ಸುಳ್ಯ, ಸುಳ್ಯ ಕ್ಲಸ್ಟರ್ ವಿಖಾಯ ಕಾರ್ಯದರ್ಶಿ ತಾಜುದ್ದೀನ್ ಆರಂತೋಡು, SKSSF ದ.ಕ ಜಿಲ್ಲಾ ಕೌನ್ಸಿಲರ್ ಶಹೀದ್ ಪಾರೆ ಜೊತೆಯಲ್ಲಿದ್ದರು.