(ನ್ಯೂಸ್ ಕಡಬ) newskadaba.com ಕಡಬ, ಜೂ.04. ಸರ್ವಧರ್ಮಿಯರ ವಿಶ್ವಾಸ ಗಳಿಸಿ ಸಮಾನತೆ ಸಹಬಾಳ್ವೆಯ ಬದಲಾವಣೆಯ ಜೀವನ ಪದ್ದತಿಯನ್ನು ಕಲ್ಪಿಸಿದ ಪ್ರದಾನಿ ನರೇಂದ್ರ ಮೋದಿಯ ಆಡಳಿತ ವೈಖರಿ ಮುಂದಿನ ವಿಧಾನ ಸಭಾ ಚುನಾವಣೆಯಪಕ್ಷದ ಗೆಲುವಿಗೆ ಶ್ರೀ ರಕ್ಷೆಯಾಗಬೇಕು ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೇಂದ್ರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಬೇಕು ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದರು.
ಕಡಬ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಎಪಿಎಂಸಿ ಚುನಾವಣೆಯಲ್ಲಿ ವಿಜೇತರಾದ ಪಕ್ಷದ ಅಭ್ಯರ್ಥಿಗಳಿಗೆ ಶುಕ್ರವಾರ ಕಡಬದಲ್ಲಿ ಹಮ್ಮಿಕೊಂಡಿದ್ದ ಅಭಿನಂದನೆ ಸಭೆಯಲ್ಲಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.ಎಪಿಎಂಸಿ ಚುನಾವಣೆಯ ಗೆಲವು ಮುಂದಿನ ಚುನಾವಣೆಗೆ ಮುನ್ನುಡಿ . ರಾಜ್ಯದಲ್ಲಿ ಪಕ್ಷ ಅಧಿಕಾರವೇರಲು ಕಾರ್ಯಕರ್ತರು ತಕ್ಷಣದಿಂದಲೇ ಸಜ್ಜಾಗಬೇಕು. ನರೇಂದ್ರ ಮೋದಿಯ ಆಡಳಿತದಿಂದ ವಿಶ್ವದಲ್ಲಿ ಭಾರತ ವಿರಾಜಮಾನಿಸುತ್ತಿದೆ. ಆದರೆ ದೇಶದೊಳಗಿನ ಕಾಂಗ್ರೆಸ್ಸಿಗರಿಗೆ ಸಹಿಸಲು ಸಾಧ್ಯವಾಗದೆ ಟೀಕೆ ಮಾಡುತ್ತಿದ್ದಾರೆ. ನೋಟ್ ಅಮಾನ್ಯ ಗೊಳಿಸದಾಗ ಬಿಜೆಪಿ ಪಕ್ಷದ ವಿರುದ್ದ ಇಲ್ಲ ಸಲ್ಲದ ಆರೋಪ ಹೊರಿಸಿದ ಕಾಂಗ್ರೆಸ್ಸಿಗರು ಮುಂದೆಂದು ಬಿಜೆಪಿ ಅಧಿಆಕರಕ್ಕೆ ಬರುವುದಿಲ್ಲ ಎಂದಿದ್ದರು ಆದರೆ ಉತ್ತರ ಪ್ರದೇಶದ ಚುನಾವಣೆ, ದೆಹಲಿಯ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ ಕಾಂಗ್ರೆಸ್ಸಿಗರು ಬಾಯಿ ಮುಚ್ಚಬೇಕಾಯಿತು. ರಾಜ್ಯದಲ್ಲಿ ರೈತರು ಸಾಲಬಾದೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ವೋಟ್ ಬ್ಯಾಂಕಿಗಾಗಿ ವಿವಿಧ ಬಾಗ್ಯಗಳ ಯೋಜನೆಗನ್ನು ನೀಡುತ್ತಿರುವುದು ನಮ್ಮ ದೌರ್ಬಗ್ಯ . ಬಿಜೆಪಿ ಮತಬೇಟೆಯ ಹಿಂದೆ ಓಡುವುದಿಲ್ಲ. ದೇಶದ ಅಭಿವೃದ್ದಿಯ ಚಿಂತನೆಯೊಂದಿಗೆ ಚುನಾವಣೆ ಎದುರಿಸಿ ಗೆಲ್ಲುವುದು ಗುರಿಯಾಗಿದೆ ಎಂದರು.
ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ ವಳಲಂಬೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದಲ್ಲಿ ಕಾರ್ಯಕರ್ತರೆ ಜೀವಾಳ. ಮುಂದಿನ ಚುನಾವಣೆಯ ಗೆಲುವಿಗಾಗಿ ಕಾರ್ಯರ್ಕತರು ಒಗ್ಗಾಟ್ಟಾಗಿ ದುಡಿಯಬೇಕು. ಬಿನ್ನಾಭಿಪ್ರಾಯಗಳನ್ನು ಒಟ್ಟಾಗಿ ಕೂತು ಚರ್ಚಿಸಿ ಪರಿಹರಿಸಕೊಳ್ಳಬೇಕು. ಸಂಘಟನೆ ಬಲವಾದಲ್ಲಿ ಎದುರಾಳಿಗಳಿಗೆ ಪಕ್ಷದ ಗೆಲುವನ್ನು ಮೀರಿಸಲು ಸಾಧ್ಯವಿಲ್ಲ . ಪ್ರತಿಯೊಬ್ಬರು ಉತ್ತಮ ಜೀವನ ನಡೆಸಲು ಉತ್ತಮ ಆಡಳಿತದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಬಿಜೆಪಿ ಗೆಲುವು ಅನಿವಾರ್ಯ .ಕಾಂಗ್ರೆಸ್ ಮುಕ್ತ ಕರ್ನಾಟಕವನ್ನಾಗಸಬೇಕು. ಇಂತಹ ಕಾರ್ಯಕ್ಕೆ ಪಕ್ಷದ ಕಾರ್ಯಕರ್ತರ ಸೇವೆ ಅಗತ್ಯವಾಗಿದೆ ಎಂದರು. ಎಪಿಎಂಸಿ ಚುನಾವಣೆಯಲ್ಲಿ ಕಡಬ ಕ್ಷೇತ್ರದಿಂದ ವಿಜೇತರಾದ ಪುಲಸ್ತ್ಯಾ ರೈ, ಮರ್ದಾಳ ಕ್ಷೇತ್ರದಿಂದ ವಿಜೇತರಾದ ಮೇದಪ್ಪ ಗೌಡ ಡೆಪ್ಪುಣಿ ಅವರುಗಳು ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಬಿಜೆಪಿ ಸುಳ್ಯ ಮಂಡಲ ಪ್ರದಾನ ಕಾರ್ಯದರ್ಶಿ ಕಿಶೋರ್ ಶಿರಾಡಿ, ರೈತ ಮೋರ್ಚಾ ಜಿಲ್ಲಾಉಪಾಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಕಡಬ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಸತೀಶ್ ನಾೖಕ್ ಮಾತನಾಡಿದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎ.ಬಿ ಮನೋಹರ ರೈ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಪ್ರಸ್ತಾವಿಸಿದರು. ಕಡಬ ಶಕ್ತಿ ಕೇಂದ್ರ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ಎನ್ ಕೆ ವಂದಿಸಿದರು. ಕುಟ್ರುಪ್ಪಾಡಿ ಗ್ರಾ.ಪಂ ಸದಸ್ಯ ಶಿವಪ್ರಸಾದ್ ಮೈಲೇರಿ ನಿರೂಪಿಸಿದರು.