ಗಂಡು ಮರಿ ಆನೆಗೆ ಜನ್ಮ ನೀಡಿದ ಬನ್ನೇರು ಘಟ್ಟ ಪಾರ್ಕ್ ನ ಹೆಣ್ಣಾನೆ ರೂಪಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.02 : ಖ್ಯಾತ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಗೆ ಇಂದು ಖುಷಿಯ ದಿನ. ಉದ್ಯಾನವನದ 12 ವರ್ಷದ ರೂಪಾ ಎಂಬ ಹೆಣ್ಣು ಆನೆ ಗಂಡು ಮರಿ ಆನೆಗೆ ಜನ್ಮ ನೀಡಿದೆ.

 

ತಾಯಿ ಮತ್ತು ಮರಿ ಆನೆ ಎರಡೂ ಆರೋಗ್ಯವಾಗಿವೆ ಎಂದು ಉದ್ಯಾನವನದ ಕಾರ್ಯಕಾರಿ ನಿರ್ದೇಶಕರು ತಿಳಿಸಿದ್ದಾರೆ. ರೂಪಾಗೆ ಇದು ಎರಡನೇ ಮರಿಯಾಗಿದ್ದು ಈ ಹಿಂದೆ 2016ರಲ್ಲಿ ಹೆಣ್ಣು ಮರಿ ಆನೆಗೆ ಜನ್ಮ ನೀಡಿತ್ತು. ಈ ಮೂಲಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ 24ಕ್ಕೇರಿದೆ.

Also Read  ಕ್ವಾರೆಂಟೈನ್ ನಲ್ಲಿದ್ದ ಯೋಧ ಹೃದಯಾಘಾತದಿಂದ ಸಾವು

error: Content is protected !!
Scroll to Top